Featured
ನನಗೂ ಕೆಟ್ಟಭಾಷೆ.. ಕೊಳಕು ಭಾಷೆ ಗೊತ್ತು..! ಸಿದ್ದುಗೆ ಈಶ್ವರಪ್ಪ ವಾರ್ನಿಂಗ್ ಕೊಟ್ಟಿದ್ದು ಯಾಕೆ..?
ಶಿವಮೊಗ್ಗ/ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಮಾಜಿ ಸಿಎಂ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ನಾನು ಕೆಟ್ಟದಾಗಿ ಮಾತನಾಡದೇ ಸುಮ್ಮನಿದ್ದೇನೆ. ನನಗೂ ಕೆಟ್ಟಭಾಷೆ, ಕೊಳಕು ಭಾಷೆ ಗೊತ್ತು ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ವಾರ್ನ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತ್ನಾಡಿದ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಬಾಯಿಗೆ ಬಂದಂತೆ ಮಾತಾಡ್ತಾರೆ. ಅದು ಸರಿಯಲ್ಲ. ಸಿದ್ದರಾಮಯ್ಯ ಬಳಸುವ ಭಾಷೆ ಸರಿಯಲ್ಲ ಎಂದು ಹರಿಹಾಯ್ದರು. ಪ್ರಧಾನಿ ನರೇಂದ್ರ ಮೋದಿಯನ್ನ ಕೋಮುವಾದಿ, ಕೊಲಗಡುಕ ಎಂದು ಸಿದ್ದು ಟೀಕಿಸೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ರು. ಪ್ರತಿಪಕ್ಷದಲ್ಲಿರೋ ಸಿದ್ದರಾಮಯ್ಯ ಸರ್ಕಾರವನ್ನ ಟೀಕಿಸಲಿ, ವೈಯಕ್ತಿಕವಾಗಿ ಈ ರೀತಿಯ ಭಾಷೆ ಸರಿಯಲ್ಲ ಎಂದು ಕಿಡಿಕಾರಿದ್ರು.
ಯಡಿಯೂರಪ್ಪ ಹಸಿರು ಶಾಲು ಹಾಕಿಕೊಳ್ಳುತ್ತಾರೆ. ನಾಚಿಕೆ ಆಗಲ್ವ ಎಂದು ಟೀಕಿಸ್ತಾರೆ. ಯಡಿಯೂರಪ್ಪ ರೈತ ಮುಖಂಡರು, ಹೋರಾಟಗಾರರು. ರೈತರ ಪರವಾಗಿ ಹಲವು ಹೋರಾಟ ಮಾಡಿದವ್ರು. ವಿನಾಃ ಕಾರಣ ಸಿದ್ದು ಈ ರೀತಿಯಾಗಿ ಟೀಕೆ ಮಾಡಿದ್ರೆ, ಮುಂದಿನ ದಿನಗಳಲ್ಲಿ ನಾನೂ ಕೂಡ ಅದೇ ರೀತಿ ಭಾಷೆ ಬಳಕೆ ಮಾಡಬೇಕಾಗುತ್ತೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?