Featured
ನಟ ನಾಗಾರ್ಜುನ ತೋಟದಲ್ಲಿ ಶವ ಪತ್ತೆ..!

ಹೈದ್ರಾಬಾದ್: ತೆಲುಗು ಚಿತ್ರನಟ ಅಕ್ಕಿನೇನಿ ನಾಗಾರ್ಜುನನ ತೋಟದಲ್ಲೊಂದು ಕೊಳೆತ ರೀತಿಯ ದೇಹ ಸಿಕ್ಕಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಹೈದ್ರಾಬಾದ್ ಹೊರವಲಯದಲ್ಲಿರುವ ನಾಗಾರ್ಜುನ ತೋಟಕ್ಕೆ ಮೊನ್ನೆ ಆಳುಗಳನ್ನ ಕಳುಹಿಸಲಾಗಿತ್ತು ಆಗ ಈ ದೇಹ ಬಿದ್ದಿರುವುದು ಗಮನಕ್ಕೆ ಬಂದಿದೆ.
ನಾಗಾರ್ಜುನ ಹಾಗೂ ಅಮಲ ಗೆ ಸೇರಿದ ಸುಮಾರು ನಲವತ್ತು ಎಕರೆ ಜಾಗವನ್ನ ಹಾಳುಬಿಡಲಾಗಿತ್ತು, ಬುಧವಾರ ತೋಟದಲ್ಲಿ ಕೃಷಿ ಮಾಡಲು ಸ್ವಚ್ಛಗೊಳಿಸಲು ಆಳುಗಳನ್ನ ಕಳುಹಿಸಲಾಗಿತ್ತು, ಆಗ ಕೊಳೆತ ವಾಸನೆ ಬಂದಿದ್ದರಿಂದ ಆ ಜಾಡು ಹಿಡಿದು ಹೋದಾಗ ಶವ ಸಿಕ್ಕಿದೆ, ಕೂಡಲೇ ಪೊಲೀಸರಿಗೆ ಫೊನ್ ಮಾಡಿ ತಿಳಿಸಿದ್ದಾರೆ. ದೇಹದ ಗುರುತು ಪತ್ತೆ ಹಚ್ಚಿರುವ ಪೊಲೀಸರು, ಸ್ಥಳೀಯ ನಿವಾಸಿ ಚಕ್ಕಳಿ ಪಂಡು (೩೦) ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
Continue Reading
Advertisement
You may like
Click to comment