Featured
ಧೋನಿ ಇಲ್ಲದ ಟೀಮ್ ಇಂಡಿಯಾ : MSD ಇನ್ನೂ ಎಷ್ಟು ದಿನ ಸಿಗಲ್ಲ ಗೊತ್ತಾ..?
ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ಧ ನಡೆಯೋ ಕ್ರಿಕೆಟ್ ಸರಣಿಗೂ ಎಂ.ಎಸ್. ಧೋನಿ ಲಭ್ಯವಿಲ್ಲ. ಈ ಕುರಿತು ಗುರುವಾರ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಟೀಂ ಇಂಡಿಯಾದ 15 ಆಟಗಾರರನ್ನು ಪ್ರಕಟಿಸಿದೆ. ಇದರಲ್ಲಿ ಧೋನಿ ಹೆಸರಿಲ್ಲ. ಎರಡು ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಇರೋದಾಗಿ ಹೇಳಿದ್ದ ಧೋನಿ, 15 ದಿನ ಸೇನೆ ಜೊತೆಗಿದ್ರು.
ಸದ್ಯ ಧೋನಿ ಅಮೆರಿಕದಲ್ಲಿ ರಜೆದಿನಗಳನ್ನ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಕುಟುಂಬದ ಜೊತೆ ಅಮೆರಿಕ ಪ್ರವಾಸದಲ್ಲಿರೋ ಧೋನಿ, ಮತ್ತಷ್ಟು ದಿನ ಕ್ರಿಕೆಟ್ನಿಂದ ದೂರ ಇರಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ನಡುವೆ, ಧೋನಿ ನಿವೃತ್ತಿ ಪಡೀತಾರಾ ಅನ್ನೋ ಮಾತುಗಳಿಗೆ ಮತ್ತಷ್ಟು ಪುಷ್ಟಿ ಕೊಡ್ತಿದೆ ಬಿಸಿಸಿಐ ಹೇಳಿಕೆ.
ವಿಶ್ವಕಪ್ ಟೂರ್ನಿ ಬಳಿಕ ಧೋನಿ, ಕ್ರಿಕೆಟ್ಗೆ ವಿದಾಯ ಹೇಳ್ತಾರೆ ಅನ್ನೋ ಮಾತುಗಳು ಜೋರಾಗಿದ್ವು. ಆದ್ರೆ, ಧೋನಿ ಮಾತ್ರ ಈವರೆಗೆ ನಿವೃತ್ತಿ ಬಗ್ಗೆ ಮಾತನಾಡಿಲ್ಲ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಧೋನಿ ನಿವೃತ್ತಿ ಬಗ್ಗೆ ತಂಡಕ್ಕೆ, ನನಗೆ ಹಾಗೂ ಬಿಸಿಸಿಐಗೆ ತಿಳಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಧೋನಿ ಏನ್ ಮಾಡ್ತಾರೆ ಅನ್ನೋದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?