Featured
ದೇವೇಗೌಡರು ಹೇಳೋದೆಲ್ಲಾ ಸುಳ್ಳು, ಗೌಡರಿಂದ ಹಲವರು ನೋವು ತಿಂದಿದ್ದಾರೆ : ಚಲುವರಾಯಸ್ವಾಮಿ
ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳೋದೆಲ್ಲಾ ಸುಳ್ಳು. ಅವರಿಂದ ಹಲವರು ನೋವು ತಿಂದಿದ್ದಾರೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಮಾತ್ನಾಡಿದ ಚೆಲುವರಾಯಸ್ವಾಮಿ, ಜನರಿಗೆ ಇದು ಮನವರಿಕೆ ಆಗುವವರೆಗೂ ಇದು ನಡೆಯುತ್ತಲೇ ಇರುತ್ತೆ. ಒಮ್ಮೆ ಜನರಿಗೆ ಅರ್ಥವಾದ್ರೆ, ಎಲ್ಲವೂ ಸರಿಯೋಗುತ್ತೆ ಎಂದು ಮಾರ್ಮಿಕವಾಗಿ ನುಡಿದ್ರು.
ಈಗಾಗಲೇ ಜಿಟಿ ದೇವೇಗೌಡ, ಗುಬ್ಬಿ ಶ್ರೀನಿವಾಸ್ ಸೇರಿದಂತೆ ಬಹುತೇಕ ನಾಯಕರು ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಯಾರೇ ಹೋದ್ರೂ, ಬಂದ್ರೂ ತಲೆಕೆಡಿಸಿಕೊಳ್ಳೋದಿಲ್ಲ. ಯಾವುದೇ ಸರ್ಕಾರ ಬಂದರೂ ನಾವು ಕಿಂಗ್ ಮೇಕರ್ ಅಂತ ಅನ್ಕೊಳ್ತಾರೆ. ಮೈಸೂರು ಭಾಗದ ಜನ ನಮ್ಮನ್ನ ನಂಬುತ್ತಾರೆ ಅನ್ನೋ ಭಾವನೆಯಲ್ಲಿ ಇದ್ದಾರೆ ಎಂದು ಆರೋಪಿಸಿದ್ರು.
ಒಕ್ಕಲಿಗರನ್ನು ದೇವೇಗೌಡರು ಬೆಳೆಸೋದಿಲ್ಲ. ಬೆಳೆಯಲು ಬಿಡಲ್ಲ ಎಂಬ ನಾರಾಯಣಗೌಡರ ಹೇಳಿಕೆಗೆ ದನಿಗೂಡಿಸಿದ ಚಲುವರಾಯಸ್ವಾಮಿ, ಇದು ಬಹಳ ವರ್ಷಗಳಿಂದೂ ನಡೆದುಕೊಂಡು ಬಂದಿದೆ. ಬಹಳಷ್ಟು ಒಕ್ಕಲಿಗರು ಇದೇ ಪರಿಸ್ಥಿತಿ ಎದುರಿಸಿದ್ದಾರೆ ಎಂದ್ರು. ಜೆಡಿಎಸ್ ಪಕ್ಷವನ್ನ ಕೇವಲ ಕುಟುಂಬದ ಹಿಡಿತಕ್ಕೆ ಸೀಮಿತಿಗೊಳಿಸಿದ್ದಾರೆ. ಹೀಗಾಗಿ ಯಾರೂ ಬೆಳೆಯಲು ಸಾಧ್ಯವಾಗಿಲ್ಲ ಎಂದು ದೇವೇಗೌಡರ ವಿರುದ್ಧ ಗುಡುಗಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?