Featured
ದೆಹಲಿ ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿಯಾದ ರಾಮಲಿಂಗಾರೆಡ್ಡಿ ಹೇಳಿದ್ದೇನು..?
![](https://risingkannada.com/wp-content/uploads/2019/09/ramalingareddy.jpg)
ನವದೆಹಲಿ : ಅಚ್ಚರಿಯ ಬೆಳವಣಿಗೆಯಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನ ದೆಹಲಿಯ ರಾಮ್ ಮನೋಹರ್ ಆಸ್ಪತ್ರೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಭೇಟಿಯಾದರು. ಬಳಿಕ ಮಾಧ್ಯಮಗಳ ಜೊತೆ ಮಾತ್ನಾಡಿದ ರಾಮಲಿಂಗಾರೆಡ್ಡಿ, 15 ಅಡಿಗಳ ದೂರದಿಂದ ಡಿಕೆಶಿ ಅವರನ್ನ ನಾನು ನೋಡಿದೆ. ನನ್ನನ್ನ ನೋಡಿ ಡಿಕೆಶಿ ವಿಶ್ ಮಾಡಿದ್ರು. ಅವರ ಆರೋಗ್ಯವನ್ನ ವೈದ್ಯರು ಪರಿಶೀಲನೆ ನಡೆಸ್ತಿದ್ರು ಎಂದು ಹೇಳಿದ್ರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ರಾಮಲಿಂಗಾರೆಡ್ಡಿ, ಇದು ಪೊಲಿಟಿಕಲ್ ಮೋಟಿವೇಟೆಡ್ ಘಟನೆ. ಸ್ವಾಯತ್ತ ಸಂಸ್ಥೆಗಳನ್ನ ಬಳಸಿಕೊಂಡು, ಪ್ರತಿಪಕ್ಷಗಳ ನಾಯಕರನ್ನ ಹಣೆಯಲು ಬಿಜೆಪಿ ಯತ್ನ ನಡೆಸಿದೆ. ಕೇಂದ್ರ ಬಿಜೆಪಿ ನಾಯಕರಿಂದ ಸದಾ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ರು.
ಡಿಕೆಶಿ ಅವರನ್ನ ಅರೆಸ್ಟ್ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ. ಹೊಸ, ಹಳೆಯ ಪ್ರಕರಣ ಅಂತ ಹೇಳಲ್ಲ. ವಿಪಕ್ಷಗಳನ್ನೇ ಟಾರ್ಗೆಟ್ ಯಾಕೆ ಮಾಡ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ರು. ಇಡಿ, ಐಟಿಯವರು ತಮ್ಮ ಕೆಲಸ ಮಾಡಲಿ. ಬೇರೆಯವರ ಕೈಗೊಂಬೆಯಾದರೆ ಹೇಗೆ..? ಇದೊಂದು ದುರುದ್ದೇಶಪೂರಿತ ಕೃತ್ಯ. ನ್ಯಾಯಕ್ಕೆ ಕೊನೆಗೂ ಜಯ ಸಿಗಲಿದೆ ಎಂದ ರಾಮಲಿಂಗಾರೆಡ್ಡಿ, ಇಡಿ ವಶಕ್ಕೆ ಪಡೆದರೆಂದು ಡಿಕೆಶಿ ಧೈರ್ಯಗುಂದಿಲ್ಲ ಎಂದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?