Featured
ದಕ್ಷಿಣ ಭಾರತದ ಮೇಲೆ ಉಗ್ರರ ಕಣ್ಣು: ಉಗ್ರರ ಚಲನವಲನಗಳ ಹಿಂದೆ ಸೇನೆ
ನವದೆಹಲಿ: ದಕ್ಷಿಣ ಭಾರತದ ಪ್ರಮುಖ ನಗರಗಳ ಮೇಲೆ ಉಗ್ರರು ದಾಳಿ ಮಾಡಬಹುದೆಂಬ ಮಾಹಿತಿ ಭಾರತೀಯ ಸೇನೆಗೆ ಸಿಕ್ಕಿರುವ ಹಿನ್ನೆಲೆ ಎಲ್ಲಾ ರಾಜ್ಯಗಳಲ್ಲೂ ಅಲರ್ಟ್ ಮಾಡಲಾಗಿದೆ.
ಲೆಫ್ಟಿನೆಂಟ್ ಜನರಲ್ ಎಸ್.ಕೆ ಸೈನಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತ-ಪಾಕಿಸ್ತಾನ ಬಾರ್ಡರ್‌ನಲ್ಲಿ ಗುಜರಾತ್ ತೀರದಲ್ಲಿ ಗೊತ್ತು ಗುರಿಯಿಲ್ಲದ ಕೆಲವು ಬೋಟ್‌ಗಳನ್ನ ವಶಪಡಿಸಿಕೊಳ್ಳಲಾಗಿದ್ದು ವಿಧ್ವಂಸಕ ಕೃತ್ಯಕ್ಕೆ ಉಗ್ರರು ತಯಾರಾಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ. ಕಳೆದ ಒಂದು ತಿಂಗಳಿನಿಂದ ಪದೇ ಪದೇ ಈ ತರಹದ ಮಾಹಿತಿಗಳನ್ನ ಭಾರತೀಯ ಸೇನೆ ರವಾನೆ ಮಾಡುತ್ತಿದೆ. ಅತೃಪ್ತ ಪಾಕಿಸ್ತಾನಕ್ಕೆ ವಿಶ್ವಮಟ್ಟದಲ್ಲಿ ಭಾರೀ ಹಿನ್ನಡೆಯಾಗುತ್ತಿರುವ ಬೆನ್ನಲ್ಲೇ ಈ ಮಾಹಿತಿಗಳು ಆಘಾತಕಾರಿಯಾಗಿವೆ.
Continue Reading
Advertisement
You may like
Click to comment