Featured
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!

ಕೃಪೆ : ANI
ಆಲಿಘಡ : ಬೈಕ್ನಲ್ಲಿ ಹೆಲ್ಮೆಟ್ ಹಾಕಿಲ್ಲ ಅಂದ್ರೆ, ಫೈನ್ ಕಟ್ಬಬೇಕು, ಇದು ಕಾಮನ್. ಆದ್ರೆ, ಇಲ್ಲೊಬ್ಬ ವ್ಯಕ್ತಿ ಕಾರಿನಲ್ಲಿ ಪ್ರಯಾಣ ಮಾಡ್ತಿರೋ ಟೈಮಲ್ಲೂ ಹೆಲ್ಮೆಟ್ ಹಾಕಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಯಾಕೆ ಹೀಗೆ, ನೀವು ಕಾರಿನಲ್ಲೂ ಹೆಲ್ಮೆಟ್ ಹಾಕಿದ್ದೀರಿ ಎಂದು ಪ್ರಶ್ನೆ ಮಾಡಿದ್ರೆ. ಅಯ್ಯೋ.. ಇತ್ತೀಚೆಗೆ ಕಾರಿನಲ್ಲಿ ಹೋಗ್ತಿರೋ ಟೈಮಲ್ಲಿ ಪೊಲೀಸರು ನನಗೆ ಹೆಲ್ಮೆಟ್ ಹಾಕಿಲ್ಲ ಎಂದು 500 ರೂಪಾಯಿ ದಂಡ ಹಾಕಿದ್ರು. ಹೀಗಾಗಿಯೇ, ಫೈನ್ ಯಾಕೆ ಕಟ್ಟಬೇಕು ಅಂತ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡಿದ್ದೇನೆಂದು ಉತ್ತರ ನೀಡಿದ್ದಾರೆ.
ಇಷ್ಟಕ್ಕೂ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಆಲಿಘಡ್ನಲ್ಲಿ. ಹೀಗೆ, ಕಾರಿನಲ್ಲೂ ಹೆಲ್ಮೆಟ್ ಹಾಕಿಲ್ಲ ಅಂತ ಇ-ಬಿಲ್ ಕೂಡ ನೀಡಿದ್ದಾರಂತೆ. ಪಿಯೂಶ್ ಅನ್ನೋ ಈ ವ್ಯಕ್ತಿಯ ಸುದ್ದಿ ವೈರಲ್ ಆಗ್ತಿದ್ದಂತೆ ಪೊಲೀಸರು ಕೂಡ ಎಚ್ಚೆತ್ತುಕೊಂಡಿದ್ದಾರೆ. ಯಾರೋ ಮಾಡಿರೋ ತಪ್ಪಿನಿಂದ ಈ ರೀತಿಯಾಗಿರಬಹುದು. ಈ ಕುರಿತು ಇ-ಬಿಲ್ ಚೆಕ್ ಮಾಡಿ, ಸೂಕ್ತ ಕ್ರಮಕೈಗೊಳ್ಳೋದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಅದೇನೇ ಆಗಿರಲಿ, ಇತ್ತೀಚೆಗೆ ಕಾರು, ಬೈಕು ರೋಡಿಗೆ ತೆಗೀಬೇಕು ಅಂದ್ರೆ ಭಯ ಆಗ್ತಿದೆ. ಯಾವುದಕ್ಕೆ ಯಾವ ರೀತಿ ಫೈನ್ ಹಾಕ್ತಾರೋ, ಸುಮ್ಮ ಸುಮ್ಮನೇ ದಂಡ ಹಾಕ್ತಾರೋ ಅಂತ ಸಾವರ್ಜನಿಕರು ತಮ್ಮ ಭಯ ತೋರಿಸಿಕೊಳ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?