Featured
ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಇನ್ಮುಂದೆ ವಿಐಪಿ ದರ್ಶನ ಇಲ್ಲ
ತಿರುಪತಿ ಭಕ್ತರಿಗೆ ಗುಡ್ ನ್ಯೂಸ್ : ಇನ್ಮುಂದೆ ವಿಐಪಿ ದರ್ಶನ ಇಲ್ಲ..!
ಮಹತ್ವದ ಬೆಳವಣಿಗೆಯಲ್ಲಿ ಇನ್ಮುಂದೆ ತಿರುಪತಿ ತಿರುಮಲ ದೇಗುಲದಲ್ಲಿ ವಿಐಪಿ ದರ್ಶನದ ವರ್ಗೀಕರಣ ರದ್ದು ಮಾಡಲಾಗಿದೆ. ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ವಿಐಪಿ ದರ್ಶನ ರದ್ದು ವಿಚಾರವಾಗಿ ಆದೇಶ ಹೊರಡಿಸಿದ್ದಾರೆ.
ತಿರುಮಲದ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಸಿಂಗ್ ಹಾಗೂ ವಿಶೇಷ ಅಧಿಕಾರಿ ಎ.ವಿ. ಧರ್ಮರೆಡ್ಡಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತ್ನಾಡಿದ ವೈ.ವಿ. ಸುಬ್ಬಾರೆಡ್ಡಿ, ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ನಿರ್ದೇಶನದ ಮೇರೆಗೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ರು.
ಟಿಟಿಡಿ ನಿರ್ಧಾರದಿಂದ ಸಾಮಾನ್ಯ ಭಕ್ತರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಲಿದೆ. ಅಲ್ಲದೆ, ಸಾಮಾನ್ಯ ಭಕ್ತರಿಗೆ ಮತ್ತಷ್ಟು ಶೀಘ್ರವಾಗಿ ತಿಮ್ಮಪ್ಪನ ದರ್ಶನ ಭಾಗ್ಯ ಸಿಗಲಿದೆ. ದೇಗುಲದಲ್ಲಿ ಸಾಮಾನ್ಯ ಯಾತ್ರಿಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೂಕಾಟ, ತಳ್ಳಾಟ ಮುಕ್ತ ದರ್ಶನಕ್ಕೆ ಅವಕಾಶ ನೀಡಬೇಕು ಹಾಗು ದರ್ಶನಕ್ಕೆ ಹೆಚ್ಚಿನ ಸಮಯ ಒದಗಿಸಬೇಕು ಎಂದು ಜನಗ್ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಐಪಿ ಸರತಿಗಳಾದ ಎಲ್ 1, ಎಲ್ 2, ಎಲ್ 3ಗಳನ್ನು ರದ್ದುಗೊಳಿಸಲಾಗಿದೆ ಎಂದು ಸುಬ್ಬಾರೆಡ್ಡಿ ವಿವರಿಸಿದರು.
ಹೊಸ ಬದಲಾವಣೆಯಿಂದ ವಿಐಪಿ ಶಿಷ್ಟಾಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಮೊದಲು ವಿಐಪಿಗಳ ದರ್ಶನಕ್ಕಾಗಿಯೇ 3 ಗಂಟೆಗಳ ಕಾಲಾವಧಿ ಮೀಸಲಿಡಲಾಗುತ್ತಿತ್ತು. ಇನ್ಮುಂದೆ ಈ ಅವಧಿಯನ್ನು ಅರ್ಧಕ್ಕೆ ಇಳಿಸಿ, ಹಂತ ಹಂತವಾಗಿ ಅವಕಾಶ ಕಲ್ಪಿಸಲಾಗುವುದು ಎಂದರು.
ಒಟ್ನಲ್ಲಿ ವಿಐಪಿ ಮಾರ್ಗ ರದ್ದಾಗಿರುವುದರಿಂದ ಸಾಮಾನ್ಯ ಭಕ್ತರಿಗೆ ಶೀಘ್ರ ದರ್ಶನ ಭಾಗ್ಯ ಸಿಗಲಿದೆ. ನೋಡೋಣ, ಇದು ಎಷ್ಟು ದಿನ ಹೇಗೆ ಜಾರಿಯಾಗುತ್ತೆ ಎಂಬುದನ್ನ..