Featured
ತಾಯಿ ಫೇಮಸ್ ಆದಳು ಅಂತ ನಾನು ಬರಲಿಲ್ಲ, ಆರೋಪ ಮಾಡುವ ಮೊದಲು ನನ್ನ ಕಥೆ ಕೇಳಿ : ರಾಣು ಮೊಂಡಲ್ ಮಗಳು
![](https://risingkannada.com/wp-content/uploads/2019/09/46a40ae5a5784545062559f6ad0fe84e.jpg)
ನವದೆಹಲಿ: ರಾಣುಮೊಂಡಲ್ ಎಂಬ ಸಾಧಾರಣ ಮಹಿಳೆ ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ತಡ, ಆಕೆಯ ಧ್ವನಿ ಎಲ್ಲರನ್ನ ಮೋಡಿ ಮಾಡಿ ಕೊನೆಗೆ ಖ್ಯಾತ ಸಂಗೀತ ಸಂಯೋಜಕ ಹಿಮೇಶ್ ರೆಷಮಿಯಾ ತನ್ನ ಸಿನಿಮಾದಲ್ಲಿ ಒಂದು ಹಾಡನ್ನ ಕೂಡ ಹಾಡಿಸಿದರು, ಆ ಹಾಡೂ ಕೂಡ ಫೇಮಸ್ ಆಯ್ತು, ನೋಡ ನೋಡುತ್ತಿದ್ದಂತೆ ಈಕೆ ಮನೆಮಾತಾದಳು, ಸಾಲದು ಎಂಬಂತೆ ನಟ ಸಲ್ಮಾನ್ ಖಾನ್ ಕೂಡ ದುಬಾರಿ ಫ್ಲಾಟ್ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಆಕೆಯ ಮಗಳು ಎಲಿಜಬೆತ್ ಸಾಥಿ ರಾಯ್ ತಾಯಿಯನ್ನ ಅರಸಿಕೊಂಡು ಬಂದು ಮಾತನಾಡಿಸಿದ್ದಳು. ಈ ಬೆಳವಣಿಗೆ ಜನರನ್ನ ಕಣ್ಣುಕೆಂಪಗಾಗಿಸಿತು. ತಾಯಿಯನ್ನ ಭಿಕ್ಷೆ ಬೇಡಿಸಿದ ಮಕ್ಕಳು ಈಗ ಬಂದರು ಅಂತ ಜರೆಯುತ್ತಿದ್ದರು. ಇದನ್ನೆಲ್ಲಾ ಸಹಿಸಿಕೊಂಡ ಮಗಳು ಮೌನ ಮುರಿದಿದ್ದಾಳೆ.
![](https://risingkannada.com/wp-content/uploads/2019/09/Ranu-Mondal-With-Her-Daughter-482x500.jpg)
ನಾನು ನನ್ನ ತಾಯಿಯನ್ನ ಎಷ್ಟು ಸಾಧ್ಯವೋ ಅಷ್ಟು ನೋಡಿಕೊಂಡಿದ್ದೇನೆ, ಆದರೆ ನಾನೇ ಸಂಕಷ್ಟದಲ್ಲಿದ್ದೇನೆ. ನಾಲ್ಕು ಮಕ್ಕಳಲ್ಲಿ ನಾನೂ ಒಬ್ಬಳು, ನನ್ನ ತಾಯಿಯನ್ನ ನಾನೇ ನೋಡಿಕೊಳ್ಳುತ್ತಿದ್ದೆ, ಪಶ್ಚಿಮ ಬಂಗಾಳದ ಬೀರ್ ಭುಮ್ ನಲ್ಲಿ ವಾಸವಿದ್ದೇನೆ, ನನ್ನ ಗಂಡ ನನಗೆ ವಿಚ್ಛೇಧನ ನೀಡಿದ್ದು ಒಂದು ಗಂಡು ಮಗು ಇದೆ, ನಮ್ಮ ಜೀವನಕ್ಕೆ ಒಂದು ಕಿರಾಣಿ ಅಂಗಡಿಯನ್ನ ಇಟ್ಟುಕೊಂಡಿದ್ದೇನೆ. ಆ ಅಂಗಡಿ ನೋಡಿಕೊಂಡಿರಲು ಹೇಳಿದ್ದೆ.
![](https://risingkannada.com/wp-content/uploads/2019/09/Ranu-Mandal-Ranu-Mandal-Daughter-Elizabeth-Sathi-Roy-Himesh-Reshammiya-1200x900-1024x768.jpg)
ಆದರೆ ನನ್ನ ತಾಯಿ ಇರಲು ಒಪ್ಪದೇ ಅಲೆಯುತ್ತಿದ್ದಳು, ಒಂದು ತಿಂಗಳ ಹಿಂದೆ ಇದೇ ರೈಲ್ವೇ ಸ್ಟೇಷನ್ ಲ್ಲಿ ಗೊತ್ತು ಗುರಿ ಇಲ್ಲದೇ ಕೂತಿದ್ದವಳನ್ನ ನೋಡಿ ಹಣ ನೀಡಿ ಮನೆಗೆ ಹೋಗು ಎಂದು ಹೇಳಿದೆ, ಆಕೆ ಒಪ್ಪದೇ ಹೊರಟಳು, ಅಂದಿನಿಂದಲೂ ನೋಡಿಕೊಂಡಿದ್ದೇನೆ, ಈಗಲೂ ಆಕೆಯ ಜೊತೆ ಇದ್ದೇನೆ, ನನ್ನೆಲ್ಲಾ ಕಷ್ಟಗಳ ನಡುವೆ ಮತ್ತೊಂದು ಆರೋಪ ಸುತ್ತಿಕೊಂಡಿದೆ, ಏನು ಮಾಡಲಿ ಎಂದು ಮರುಗಿದ್ದಾರೆ.