Featured
ತಲೆಹರಟೆ ಟ್ವೀಟ್‌ಗೆ ಕನ್ನಡ ಸುದ್ದಿ ಮಾಧ್ಯಮಗಳು ಕಕ್ಕಾಬಿಕ್ಕಿ : ಮೈಸೂರ್‌ಪಾಕ್ ತಮಿಳುನಾಡಿಗೆ ಹೋಯ್ತಲ್ಲಪ್ಪ..!

ಬೆಂಗಳೂರು: ರಾಜ್ಯದ ಸುದ್ದಿ ಮಾಧ್ಯಮಗಳಿಗೆ ನಿರ್ಮಲಾ ಸೀತಾರಾಮನ್ ಇವತ್ತು ಆಹಾರವಾಗಬೇಕಿತ್ತು. ಆದರೆ ಜನರ ಬಾಯಲ್ಲಿ ಚಾನೆಲ್‌ಗಳೇ ಮೇವು ಆದ ಸಂದರ್ಭಕ್ಕೆ ಇಂದು ಸಾಕ್ಷಿಯಾಯ್ತು. ತಮಿಳುನಾಡಿನ ಲೇಖಕನೊಬ್ಬ ವಿಡಂಬನಾತ್ಮಕ ಟ್ವೀಟ್ ಮಾಡಿದ್ದೇ ಈ ಯಡವಟ್ಟಿಗೆ ಕಾರಣ. ಇದನ್ನ ಕನ್ನಡದ ಸುದ್ದಿ ಮಾಧ್ಯಮಗಳು ಪ್ರಸಾರ ಮಾಡಿ ನಂತರ ತುಪುಕ್ ಅಂತ ಲೇಖಕನಿಗೆ ಉಗಿದಿವೆ. ಏನದು ಸುದ್ದಿ ಅಂತೀರಾ ಇಲ್ಲಿದೆ ಓದಿ.. DEAR @tv9kannada. YOU CANNOT BE SERIOUS. Stop this. AT ONCE.
For heaven's sake, @smitaprakash, please intervene and calm the waters. Things are getting out of hand. pic.twitter.com/HTTFrdkK3O— Anand Ranganathan (@ARanganathan72) September 16, 2019
ಡಾ. ಆನಂದ್ ರಂಗನಾಥನ್ ತಮಿಳುನಾಡಿನ ಸಾಮಾನ್ಯ ಲೇಖಕ ಹಾಗೂ ಅಂಕಣಕಾರ. ಈತ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜತೆಗೆ ನಿಂತು, ಮೈಸೂರ್ ಪಾಕ್ ಹಿಡಿದುಕೊಂಡಂತಿರುವ ಫೋಟೋ ಟ್ವೀಟ್ ಮಾಡಿದ್ದಾನೆ.
ನಿರ್ಮಲಾ ಸೀತಾರಾಮನ್ ಮೈಸೂರ್ ಪಾಕ್ ತಮಿಳುನಾಡಿನದ್ದು ಎಂದು, ವಿಶ್ವಮಾನ್ಯತೆ ಅಂದರೆ ಜಿಯೋ ಟ್ಯಾಗ್ ನೀಡಿರೋದ್ರಿಂದ ಏಕ ಸಮಿತಿ ಸದಸ್ಯನಿಂದ ಸಿಹಿ ಮೂಲಕ ಮೆಚ್ಚುಗೆ ಎಂದು ಹಾಕಿದ್ದಾರೆ. ಇದನ್ನ ರಾಜ್ಯದ ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಕೂಡ ಶೇರ್ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈ ಟ್ವೀಟ್‌ಗಳನ್ನ ನೋಡಿದ ರಾಜ್ಯದ ಟಾಪ್ ಚಾನೆಲ್ ನೇರವಾಗಿ ಅಖಾಡಕ್ಕೆ ಇಳೀತು. ಕೇಂದ್ರದ ವಿರುದ್ಧ ಹರಿಹಾಯ್ದು ಮೈಸೂರ್ ಪಾಕ್ ತಮಿಳುನಾಡಿಗೆ ಹೇಗೆ ಸೇರಿತು..? ಸಚಿವೆಗೆ ಮಾಹಿತಿ ಇಲ್ವಾ ಅಂತ ಸುದ್ದಿ ಪ್ರಸಾರ ಮಾಡಿತು.
ಟಾಪ್ ಚಾನೆಲ್ ಅನುಕರಣೆಗೆ ಇಳಿದ ಇನ್ನೊಂದಿಷ್ಟು ಚಾನೆಲ್‌ಗಳು ಇದೇ ಹಾದಿ ಹಿಡಿದವು. ಅಷ್ಟರಲ್ಲಾಗಲೇ ಟ್ವೀಟ್ ಮಾಡಿದ್ದ ರಂಗನಾಥನ್, ಮೊದಲು ನಿಲ್ಲಿಸಿ ಇದನ್ನ ಸೀರಿಯಸ್ ಆಗಿ ತಗೋಬೇಡಿ ಎಂದು ಟ್ವೀಟ್ ಮಾಡಿದರು. ಎಲ್ಲಾ ಚಾನೆಲ್‌ಗಳನ್ನ ಪುನಃ ಲೇವಡಿ ಮಾಡಿದರು.
ಈತ ರಂಗನಾಥನ್ ಇದೇ ಮೊದಲಲ್ಲ. ಮೈಸೂರು ಪಾಕ್ ವಿಚಾರದಲ್ಲಿಯೇ 2015ರಲ್ಲಿ ವಿವಾದ ಹುಟ್ಟುಹಾಕಿದ್ದರು. ಮೈಸೂರು ಪಾಕ್ ತಮಿಳುನಾಡಿಗೆ ಸೇರಿದ್ದು, ಇದನ್ನ ಲಾರ್ಡ್ ಮೆಕಾಲೆ ಒಪ್ಪಿಕೊಂಡಿದ್ದರು ಎಂದು ಹೇಳಿಕೊಂಡಿದ್ದರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















