Featured
ಡಿಕೆಶಿಗೆ ನಾಳೆಯಾದರೂ ಜಾಮೀನು ಸಿಗುತ್ತಾ..? ಬೇಲಾ..? ಜೈಲಾ..? ಕಸ್ಟಡಿಯೋ..?
![](https://risingkannada.com/wp-content/uploads/2019/09/dk_shivakumar-770x433.jpeg)
ನವದೆಹಲಿ : ಅಕ್ರಮ ಹಣ ಪ್ರಕರಣದಲ್ಲಿ ಇಡಿ ವಿಚಾರಣೆಯಲ್ಲಿ ಬಂಧಿಯಾಗಿರೋ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ನಾಳೆ ನಿರ್ಣಯಕ ದಿನ. ಇಡಿ ಕಸ್ಟಡಿ ನಾಳೆಗೆ ಮುಗಿಯಲಿದ್ದು, ಇಡಿ ವಿಶೇಷ ಕೋರ್ಟ್ಗೆ ಡಿಕೆ ಶಿವಕುಮಾರ್ ಅವರನ್ನ ನಾಳೆ ಇಡಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ. ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಕೆಶಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
![](https://risingkannada.com/wp-content/uploads/2019/09/dkshi-1.jpeg)
ಆರಂಭದಲ್ಲಿ ನಾಲ್ಕು ದಿನ ವಿಚಾರಣೆ ನಡೆಸಿದ್ದ ಇಡಿ, ಬಳಿಕ ಕೋರ್ಟ್ ಆದೇಶದಂತೆ 10 ದಿನ ಕಸ್ಟಡಿಗೆ ಪಡೆದುಕೊಂಡಿತ್ತು. ಇದಾದ್ಮೇಲೆ ಮತ್ತೆ 5 ದಿನ ಕಸ್ಟಡಿಗೆ ಪಡೆದುಕೊಂಡಿತ್ತು ಇಡಿ. ಇದೀಗ ನಾಳೆಗೆ ಇಡಿ ಕಸ್ಟಡಿ ಮುಗಿಯಲಿದೆ. ಈ ನಡುವೆ, ಅನಾರೋಗ್ಯದ ವಿಚಾರವಾಗಿ ಡಿಕೆಶಿ ವಕೀಲರು ವಾದ ಮಂಡನೆ ಮಾಡೋ ಸಾಧ್ಯತೆ ಇದ್ದು, ಜಾಮೀನು ಕೋರಬಹುದು. ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
![](https://risingkannada.com/wp-content/uploads/2019/09/dk-ed-1.jpg)
ಇಷ್ಟೆಲ್ಲರದ ಮಧ್ಯೆ, ಡಿಕೆಶಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿರೋ ಇಡಿ, ಜಾಮೀನು ನೀಡದಂತೆ ವಾದ ಮಂಡಿಸಲಿದೆ. ಡಿಕೆಶಿ ಇಡಿ ವಿಚಾರಣೆಗೆ ಸರಿಯಾಗಿ ಸ್ಪಂದನೆ ಮಾಡ್ತಿಲ್ಲ. ಎರಡು ದಿನ ಆಸ್ಪತ್ರೆಯಲ್ಲೇ ಕಳೆದಿದ್ದು, ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ಕೇಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ನಾಳೆ ಡಿಕೆಶಿಗೆ ನಿರ್ಣಯಕ ದಿನವಾಗಿದ್ದು, ಜೈಲೋ..? ಬೇಲೋ..? ಅಥವಾ ಮತ್ತೆ ಕಸ್ಟಡಿಗೋ ಕಾದುನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?