Featured
ಡಿಕೆಶಿಗೆ ದರೋಡೆ ಮಾಡೋಕೆ ಹೇಳಿದ್ವಾ..? ಹೀಗೆ ಹೇಳಿದ್ರಾ ಹೆಚ್.ಡಿ. ಕುಮಾರಸ್ವಾಮಿ..? : ಚಲುವರಾಯಸ್ವಾಮಿ ಬಾಂಬ್
ಮಂಡ್ಯ : ಮಂಡ್ಯ ಚುನಾವಣೆ ಸಮಯದಲ್ಲಿ ಜೋಡೆತ್ತು ಎಂದೇ ಖ್ಯಾತಿ ಪಡೆದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡೆವೆ ಎಲ್ಲವೂ ಸರಿ ಇರಲಿಲ್ವಾ..? ಹೀಗೊಂದು ಪ್ರಶ್ನೆಗೆ ಕಾರಣವಾಗಿರೋದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆ. ಮಂಡ್ಯದಲ್ಲಿ ಮಾತ್ನಾಡಿದ ಚಲುವರಾಯಸ್ವಾಮಿ, ಡಿಕೆಶಿಗೆ ದರೋಡೆ ಮಾಡೋಕೆ ನಾವು ಹೇಳಿದ್ವಾ ಅಂತ ಕುಮಾರಸ್ವಾಮಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ರು.
ಡಿಕೆಶಿ ಪರ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸಿದಾಗಿ, ಹೆಚ್ಡಿಕೆ ಭಾಗಿಯಾಗಿರಲಿಲ್ಲ. ಯಾಕೆ ಭಾಗಿಯಾಗಿಲ್ಲ ಅಂತ ಜೆಡಿಎಸ್ ಕಾರ್ಯಕರ್ತರು ಕೇಳಿದ್ರೆ, ನಾವೇನು ಡಿಕೆಶಿಗೆ ದರೋಡೆ ಮಾಡಲು ಹೇಳಿದ್ವಾ ಅಂತ ಮೈಸೂರಿನಲ್ಲಿ ಹೇಳಿದ್ರು ಎಂದು ಚಲುವರಾಯಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಡಿಕೆಶಿ ದರೋಡೆ ಮಾಡಿ, ಸಾವರ್ಜನಿಕವಾಗಿ ಹಂಚುತ್ತಿದ್ದಾರಾ..? ಇದಕ್ಕೆ ನಾನು ಹೊಣೆನಾ..? ನಾನು ಸಭೆಗೆ ಯಾಕೆ ಹೋಗಬೇಕಿತ್ತು ಎಂದು ಕುಮಾರಸ್ವಾಮಿ ಜೆಡಿಎಸ್ ಸಭೆಯಲ್ಲಿ ಮಾತ್ನಾಡಿದ್ದಾರಂತೆ. ಹೀಗಂತ ಚಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇಷ್ಟೆಲ್ಲಾ ಆರೋಪ ಮಾಡಿದ ಚಲುವರಾಯಸ್ವಾಮಿ, ಹೆಚ್ಡಿಕೆ ಈ ರೀತಿ ಮಾತ್ನಾಡಿದ್ದಾರಂತೆ. ಆದ್ರೆ, ಸತ್ಯ ಏನು ಅನ್ನೋದು ನನಗೂ ಗೊತ್ತಿಲ್ಲ ಎಂದು ಜಾರಿಕೊಂಡ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?