Featured
ಡಿಕೆಶಿಗೆ ಜೈಲೋ..? ಬೇಲೋ..? : ತಿಹಾರ್ ಜೈಲಿಗೆ ಹೋಗಬೇಕಾ ಡಿಕೆ ಶಿವಕುಮಾರ್..?
ನವದೆಹಲಿ : ಡಿಕೆ ಶಿವಕುಮಾರ್ ಅವರ ಇಡಿ ಕಸ್ಟಡಿ ಸೆಪ್ಟೆಂಬರ್ 13ಕ್ಕೆ ಅಂದ್ರೆ, ನಾಳೆ ಶುಕ್ರವಾರಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಡಿಕೆಶಿ ಅವರನ್ನ ಇಡಿ ಅಧಿಕಾರಿಗಳು ಮತ್ತೆ ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ಹೀಗಾಗಿ, ನಾಳೆ ಡಿಕೆ ಶಿವಕುಮಾರ್ ಅವರಿಗೆ ಜೈಲೋ..? ಅಥವಾ ಬೇಲೋ ಅನ್ನೋ ಕುತೂಹಲ ಮೂಡಿಸಿದೆ.
ಇಡಿ ಅಧಿಕಾರಿಗಳು ಈಗಾಗಲೇ ಸುಮಾರು 14 ದಿನ ಡಿಕೆಶಿ ಅವರನ್ನ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ಬಂಧನಕ್ಕೂ ಮುನ್ನ 4 ದಿನ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು, ಬಳಿಕ ಕೋರ್ಟ್ ಆದೇಶದಂತೆ 10 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ರು. ಈಗ ನಾಳೆ ಇಡಿ ಕಸ್ಟಡಿ ಮುಗಿಯಲಿದ್ದು, ಮತ್ತಷ್ಟು ದಿನ ಇಡಿ ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಸದ್ಯ ಡಿಕೆಶಿ ಪ್ರಕರಣದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಗೆ ಸಮನ್ಸ್ ನೀಡಿ, ಪುತ್ರಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನ ಇನ್ನಷ್ಟು ದಿನ ವಿಚಾರಣೆಗೆ ಒಳಪಡಿಸಬೇಕು ಎಂದು ಇಡಿ ವಾದಿಸೋ ಸಾಧ್ಯತೆ ಇದೆ. ಇತ್ತ, ಡಿಕೆ ಶಿವಕುಮಾರ್ ಮಾತ್ರ ಜಾಮೀನು ಪಡೆದುಕೊಂಡು ಹೊರ ಬರುವ ನಿರೀಕ್ಷೆಯಲ್ಲಿದ್ದಾರೆ.
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಕೇಜ್ರಿವಾಲ್ ಪರ ಪ್ರತಿಭಟನೆಗೆ ಮುಂದಾದ ವಕೀಲರು : ಎಚ್ಚರಿಕೆ ನೀಡಿದ ಹೈಕೋರ್ಟ್
ದೆಹಲಿಯಲ್ಲಿ ಭೀಕರ ದುರಂತ.. 2 ಅಂತಸ್ತಿನ ಕಟ್ಟಡ ಧರಾಶಾಹಿ..ಇಬ್ಬರ ದುರ್ಮರಣ
ದೆಹಲಿ ಮದ್ಯ ಹಗರಣ ಕೇಸ್; ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ