Featured
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಜೈಲೂಟ ಗ್ಯಾರೆಂಟಿ : ಸವಾರರೇ ಎಚ್ಚರ ಎಚ್ಚರ..!

ನವದೆಹಲಿ : ಅಡ್ಡ ದಿಡ್ಡಿ ಗಾಡಿ ಓಡಿಸೋದು, ಟ್ರಾಫಿಕ್ಸ್ ಸಿಗ್ನಲ್ ಜಂಪ್ ಮಾಡೋದು, ಓವರ್ ಸ್ಪೀಡ್ ಡ್ರೈವ್ ಮಾಡೋದು, ಆ್ಯಂಬುಲೆನ್ಸ್ಗೆ ದಾರಿ ಬಿಡದೇ ಸತಾಯಿಸೋದು ಮಾಡಿದ್ರಿ ಇನ್ಮುಂದೆ ಜೈಲೂಟ ಗ್ಯಾರೆಂಟಿ. ಹೌದು, ಮೋಟಾರು ವಾಹನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದ್ದು, ಕಾರ್ಯರೂಪಕ್ಕೆ ಬಂದಿದೆ.
ಯಾವ ತಪ್ಪಿಗೆ ಎಷ್ಟು ದಂಡ..? ಏನು ಶಿಕ್ಷೆ ಅಂತ ನೋಡಿ..
ಆ್ಯಂಬುಲೆನ್ಸ್ಗೆ ದಾರಿ ಬಿಡದಿದ್ದರೆ 10 ಸಾವಿರ ದಂಡ
ಲೈಸನ್ಸ್ ನಿಯಮ ಉಲ್ಲಂಘನೆ 1 ಲಕ್ಷ
ಅತೀ ವೇಗ ಚಾಲನೆ 1 – 2 ಸಾವಿರ ದಂಡ
ವಿಮೆ ಇಲ್ಲದೇ ಇದ್ರೆ 2 ಸಾವಿರ ದಂಡ
ಹೆಲ್ಮೆಟ್ ಇಲ್ಲದ ಡ್ರೈವಿಂಗ್ 1 ಸಾವಿರ ದಂಡ
ಟ್ರಾಫಿಕ್ಸ್ ಸಿಗ್ನಲ್ ಜಂಪ್ 500 – 2000 ರೂ.
ಲೈಸನ್ಸ್ ಇಲ್ಲದೇ ಡ್ರೈವಿಂಗ್ 5 ಸಾವಿರ
ಱಷ್ ಡ್ರೈವಿಂಗ್ 1 – 5 ಸಾವಿರ
ಡ್ರಂಕ್ ಅಂಡ್ ಡ್ರೈವ್ 10 ಸಾವಿರ
ಕೇವಲ ದಂಡವಷ್ಟೇ ಅಲ್ಲ ಜೈಲುವಾಸ ಇರುತ್ತೆ..!
ಹೌದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕೇವಲ ದಂಡವಷ್ಟೇ ಅಲ್ಲ. ದಂಡದ ಜೊತೆ ಜೈಲು ವಾಸವೂ ಫ್ರೀಯಾಗಿ ಸಿಗುತ್ತೆ. ಹೊಸ ಕಾಯ್ದೆಯಲ್ಲಿ 6 ತಿಂಗಳ ಜೈಲು ಶಿಕ್ಷೆಯನ್ನೂ ಸೇರಿಸಲಾಗಿದೆ. ಕೆಲವು ನಿರ್ಧಿಷ್ಠ ನಿಯಮಗಳ ಉಲ್ಲಂಘನೆಗೆ ದಂಡದ ಜೊತೆ ಜೈಲು ಶಿಕ್ಷೆಯೂ ಆಗಲಿದೆ. ಸೋ, ಇನ್ನುಂದೆ ಸಂಚಾರಿ ನಿಯಮಗಳನ್ನ ಉಲ್ಲಂಘಿಸುವ ಮೊದಲು ಈ ಕಾಯ್ದೆಯನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?