Featured
ಟ್ರಯಲ್ ರೂಮ್ಗೆ ಹೋಗ್ತೀರಾ..? ಹೆಣ್ಣು ಮಕ್ಕಳೇ ಹುಷಾರ್, CCTV ಹಿಡನ್ ಕ್ಯಾಮೆರಾ ಇದೆ..!
![](https://risingkannada.com/wp-content/uploads/2019/09/delhi-girl.jpg)
ನವದೆಹಲಿ : ಇಷ್ಟೇ ಜಾಗರೂಕತೆಯಿಂದ ಇದ್ದರೂ, ಕಿಡಿಗೇಡಿಗಳು ಮಾಡೋ ಕೃತ್ಯಗಳು ಒಂದೆರಡಲ್ಲ. ಅದರಲ್ಲೂ ಬಟ್ಟೆ ಅಂಗಡಿ, ಮಾಲ್ಗಳಲ್ಲಿ ಟ್ರಯಲ್ ರೂಮ್ಗಳಿಗೆ ಹೋಗುವ ಮುನ್ನ ಎಚ್ಚರವಾಗಿ ಇರಬೇಕು. ದೆಹಲಿಯಲ್ಲಿ ಇತ್ತೀಚೆಗೆ ಪತ್ರಕತ್ರೆಯೊಬ್ಬರು ಬಟ್ಟೆ ಖರೀದಿ ಮಾಡಿದ್ರು. ಈ ವೇಳೆ ಟ್ರಯಲ್ ರೂಮ್ಗೆ ಹೋಗಿ ಬಂದ್ರು. ಮತ್ತೊಮ್ಮೆ ಅದೇ ಟ್ರಯಲ್ ರೂಮ್ಗೆ ಹೋಗುವಾಗ ಆಕೆಗೆ ಶಾಕ್ ಆಗಿತ್ತು.
ಯೆಸ್, ಆ ಟ್ರಯಲ್ ರೂಮ್ನಲ್ಲಿ ಸಿಸಿಟಿವಿ ಹಿಡನ್ ಕ್ಯಾಮರಾ ಇಡಲಾಗಿತ್ತು. ಸ್ವತಃ ಆ ಅಂಗಡಿಯ ಮಹಿಳಾ ಸಿಬ್ಬಂದಿಯೇ ಬಂದು, ಪತ್ರಕತ್ರೆಯ ಬಳಿ ಈ ವಿಷಯ ಹೇಳಿದ್ದರು. ನೀವು ಮತ್ತೊಂದು ಟ್ರಯಲ್ ರೂಮ್ಗೆ ಹೋಗಿ, ಈ ಟ್ರಯಲ್ ರೂಮ್ಗೆ ಬೇಡ ಎಂದಿದ್ರು. ಯಾಕೆ ಎಂದು ವಿಚಾರಿಸಿದಾಗ, ಆ ಟ್ರಯಲ್ ರೂಮ್ನಲ್ಲಿ ಸಿಸಿಟಿವಿ ಇರೋದು ಗೊತ್ತಾಯ್ತು. ತಕ್ಷಣ ಪೊಲೀಸರನ್ನ ಕರೆಸಿ, ದೂರು ನೀಡಲಾಯ್ತು.
ಆದ್ರೆ, ಪತ್ರಕತ್ರೆ ಪೊಲೀಸರನ್ನ ಕರೆಯುವ ವೇಳೆಗಾಗಲೇ, ಶೋ ರೂಮ್ನ ಮಾಲೀಕ, ತನ್ನ ಮಗನನ್ನ ಕರೆಸಿ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋವನ್ನ ಡಿಲೀಟ್ ಮಾಡಿಸಿದ್ದಾನೆ. ಸದ್ಯ ಎಫ್ಐಆರ್ ದಾಖಲಾಗಿದ್ದು, ದೆಹಲಿಯ ಗ್ರೇಟರ್ ಕೈಲಾಶ್ ಪೊಲೀಸರು ತನಿಖೆ ನಡೆಸಿದ್ದಾರೆ.
ಯಾವುದಕ್ಕೂ ಟ್ರಯಲ್ ರೂಮ್ಗೆ ಹೋದಾಗ ಒಮ್ಮೆ ಎಚ್ಚರಿಕೆಯಿಂದ ಇದ್ದರೆ ನಮಗೇ ಒಳ್ಳೇದು.ಈ ಸ್ಟೋರಿ ಕುರಿತು ನಿಮ್ಮ ಅಭಿಪ್ರಾಯ ಹಾಗೂ ಸಲಹೆಯನ್ನ ಕಾಮೆಂಟ್ ಮಾಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?