ಚಂಡಿಗಢ್ : ಹೊಸ ಮೋಟಾರ್ ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ಪೊಲೀಸ್ ಪಿಸಿಆರ್ ವಾಹನದ ಮೇಲೂ ದಂಡ ಬಿದ್ದಿದೆ. ಪ್ರತೀ ದಿನ ಹೊಸ ಹೊಸ ಕಥೆಗಳನ್ನ ಸೃಷ್ಟಿ ಮಾಡುತ್ತಿರುವ ಈ ಕಾಯ್ದೆ ಪೊಲೀಸ್ ಗಸ್ತುವಾಹನಕ್ಕೂ ಶಾಕ್ ನೀಡಿದೆ. ಚಂಡಿಗಢದ ಹವಾಮಾನ ಇಲಾಖೆ ಬಳಿಯ ಸಿಗ್ನಲ್ನಲ್ಲಿ ಝೀಬ್ರಾ ಕ್ರಾಸಿಂಗ್ ಆಚೆ ನಿಂತಿದ್ದ ಪಿಸಿಆರ್ ವಾಹನಕ್ಕೂ ದಂಡ ಹಾಕಲಾಗಿದೆ.
ಅಷ್ಟಕ್ಕೂ ಪೊಲೀಸರೇನು ದಂಡ ಹಾಕಲಿಲ್ಲ, ಈ ಕಾರಿನ ಹಿಂದೆ ನಿಂತಿದ್ದ ವ್ಯಕ್ತಿ, ಸಂಚಾರಿ ನಿಯಮ ಉಲ್ಲಂಘಿಸಿದ ಕಾರ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಟ್ವಿಟ್ಟರ್ನಲ್ಲಿ ಪೊಲೀಸ್ ಇಲಾಖೆಗೆ ಅಧಿಕೃತ ಖಾತೆಯನ್ನ ಮೆನ್ಷನ್ ಮಾಡಿದ್ದ, ಎಲ್ಲಾ ಸಾಮಾಜಿಕ ಜಾಲತಾಣ ಬಳಕೆದಾರರು ಚಂಡಿಗಢ ಪೊಲೀಸರಿಂದ ಎಷ್ಟರಮಟ್ಟಿಗೆ ಕಾಯ್ದೆ ಪರಿಪಾಲನೆಯಾಗುತ್ತಿದೆ ನೋಡಿ ಎಂದು ಕುಹಕವಾಡಿ ಪುನಃ ಪುನಃ ಟ್ಯಾಗ್ ಮಾಡ್ತಿದ್ದರು. ಅಲ್ಲಿಗೆ ಪೊಲೀಸ್ ಇಲಾಖೆ ಪಿಸಿಆರ್ ಮೇಲೆ ಚಲನ್ ಹರಿದಿದೆ.
ನೋಯ್ಡಾ ಪೊಲೀಸರು ಒಂದು ನಿಮಿಷದ ಅಂತರದಲ್ಲಿ ಎರಡು ಬಾರಿ ದಂಡದ ಚಲನ್ ಕಳಿಸಿದ್ರು ಓದಿ
ರಾಜ್ಯದಲ್ಲಿ ದುಬಾರಿ ದಂಡಕ್ಕೆ ಬ್ರೇಕ್ : ಜನಾಕ್ರೋಶಕ್ಕೆ ಮಣಿದ ಯಡಿಯೂರಪ್ಪ ಸರ್ಕಾರ
ದಂಡಕ್ಕೆ ಹೆದರಿ ಕಾರಿನಲ್ಲೂ ಹೆಲ್ಮೆಟ್ ಹಾಕಿಕೊಂಡ ಮಹಾನುಭಾವ..! ಅಚ್ಚರಿಯಾದ್ರೂ ಸತ್ಯ..!
ಯಾರಿಗೆ ಹೇಳೋದು..? ನನ್ನ ಕಾರಿಗೂ ಓವರ್ಸ್ಪೀಡ್ ಅಂತ ದಂಡ ಹಾಕಿದ್ರು..! ಗಡ್ಕರಿ
ಸವಾರರಿಗೆ ದುಬಾರಿ ದಂಡ : ಸಚಿವ ಶ್ರೀರಾಮುಲು ವಿರೋಧ..!
SP ಕೈಗೆ ಸಿಕ್ಕ ಟ್ರಾಫಿಕ್ ಪೊಲೀಸ್ಗೂ ಬಿತ್ತು 34 ಸಾವಿರ ರೂ ದಂಡ