Featured
ಜನರ ಗಮನ ಸೆಳೆಯೋಕೆ ಪ್ರಾಣವನ್ನೇ ಪಣಕ್ಕಿಟ್ಟ ಜೋಡಿಗೆ ನೆಟ್ಟಿಗರ ತರಾಟೆ : ನೀವೂ ಕಾಮೆಂಟ್ ಮಾಡಿ

ರೈಸಿಂಗ್ ಕನ್ನಡ ಸ್ಪೆಷಲ್ : ಈ ಫೋಟೋ ನೋಡಿದ್ರೆ ಯಾರಿಗಾದ್ರೂ ಸರಿ, ಏನಪ್ಪಾ ಇವ್ರು ಇಷ್ಟೊಂದು ಸಾಹಸ ಮಾಡಿದ್ದಾರೆ. ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಏನ್ ಕಥೆ ಅಂತ ಅನ್ಸೋದು ಗ್ಯಾರೆಂಟಿ. ಅದರಲ್ಲೂ ಇತ್ತೀಚೆಗೆ ಟಿಕ್ಟಾಕ್ ಮಾಡೋಕೆ ಹೋಗಿ ಮೃತಪಟ್ಟವರ ಸಂಖ್ಯೆ ಜಾಸ್ತಿಯಾಗ್ತಿದೆ. ಇಂಥ ಟೈಮಲ್ಲಿ ಈ ಜೋಡಿಗೆ ರೊಮ್ಯಾನ್ಸ್ ಮಾಡೋಕೆ ಎಲ್ಲೂ ಜಾಗನೇ ಸಿಗಲಿಲ್ವಾ ಅನ್ನೋ ಪ್ರಶ್ನೆ ಮೂಡೋದು ಸಹಜ.
ಇಷ್ಟಕ್ಕೂ ವಿಚಾರ ಏನಪ್ಪ
ಅಂದ್ರೆ, ಈ ಜೋಡಿಯ ಹೆಸರು ಕೆಲ್ಲಿ ಕಾಸ್ಟಿಲ್ ಹಾಗೂ ಕೋಡಿ ವರ್ಕ್ಮಾನ್. ಟ್ರಾವಲಿಂಗ್ ಅಂದ್ರೆ,
ಇವ್ರಿಗೆ ಪ್ರಾಣ. ಹೀಗೆ ಇಡೀ ಪ್ರಪಂಚ ಸುತ್ತುತ್ತಾ, ಅಲ್ಲಿನ ಸುಂದರ ಫೋಟೋಗಳನ್ನ, ಅದ್ಭುತ ಪರಿಸರವನ್ನ
ಹಾಗೂ ಡೇರ್ ಅಂಡ್ ಡ್ಯಾಶಿಂಗ್ ಎನ್ನಿಸುವಂತ ರೋಚಕ ಕ್ಷಣಗಳನ್ನ ಇವರು ಸೋಶಿಯಲ್ ಮೀಡಿಯಾದಲ್ಲಿ ಶೇರ್
ಮಾಡ್ತಾರೆ. ಅದರಂತೆ ಈ ಫೋಟೋವನ್ನ ಇನ್ಸ್ಟಾ ಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಈಗ ಟೀಕೆಗಳಿಗೆ ಗುರಿಯಾಗಿದ್ದಾರೆ.
ಪೆರುವಿಯನ್ ಆ್ಯಂಡ್ಸ್ನ
ಸಮುದ್ರ ತೀರದಲ್ಲಿ ತೆಗೆದಿರೋ ಫೋಟೋ ಇದಾಗಿದ್ದು, ಸುಮಾರು 100 ಅಡಿ ಎತ್ತರದಲ್ಲಿ ಹೀಗೆ ಡೇಂಜರಸ್
ಆಗಿ ಫೋಟೋ ತೆಗೆದಿದ್ದಾರೆ. ನಮಗೇನು ಇದು ಡೇಂಜರಸ್ ಎನ್ನಿಸಲಿಲ್ಲ . ನಾವು ಇದನ್ನ ತುಂಬಾನೇ ಎಂಜಾಯ್
ಮಾಡಿದ್ವಿ ಎಂದು ಫೋಟೋ ಹಾಕಿದ್ದಾರೆ.
ಇವರ ಇನ್ಸ್ಟಾ ಗ್ರಾಂ ಪೋಸ್ಟ್ಗೆ 1500ಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿದ್ದು, ಬಹುತೇಖರು ಈ ಜೋಡಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾಕೆ ಈ ರೀತಿಯಾ ಡೇಂಜರಸ್ ಫೋಟೋಗಳನ್ನೇ ತೆಗೀತಿರಿ ಅಂತ ಕೇಳವ್ರು ಕೇಳಿದ್ರೆ, ಇದು ಸ್ಟುಪಿಡಿಟಿ ಎಂದು ಕೆಲವ್ರು ಬೈದಿದ್ದಾರೆ.
ನಿಮಗೆ ಈ ಸ್ಟೋರಿ ನೋಡಿದ್ಮೇಲೆ ಏನು ಅನ್ನಿಸ್ತು ಅನ್ನೋದನ್ನ ಕಾಮೆಂಟ್ ಮಾಡಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?