Featured
ಚಳಿಗಾಲದ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಶುಂಠಿ ಉತ್ತಮ ಮನೆಮದ್ದು..!
ರೈಸಿಂಗ್ ಕನ್ನಡ :- ಚಳಗಾಲ ಬಂತೆದರೆ ಸಾಕು, ಅದರೊಂದಿಗೆ ಅನಾರೋಗ್ಯದ ಸಮಸ್ಯೆಗಳು ಕೂಡ ಕಂಡು ಬರುತ್ತವೆ. ಹೀಗಾಗಿ ಹಿರಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಚಳಿಗಾಲದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಕಂಡು ಬರುವ ಸಾಮನ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಇರುವ ಕೆಲ ಪದಾರ್ಥಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದರಲ್ಲೂ ಶುಂಠಿವೊದ್ದಿದ್ದರೆ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಏಕೆಂದರೆ ಶುಂಠೀಯು ಆ್ಯಂಟಿ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಳಿಗಾಲದಲ್ಲಿ ಶೀತ ಮತ್ತು ನೆಗಡಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಶೀತ ಮತ್ತು ನೆಗಡಿ :- ಚಳಿಗಾಲದಲ್ಲಿ ಶೀತ ಮತ್ತು ನೆಗಡಿ ಸಮಸ್ಯೆಗಳು ಕಾಣಿಸಿಕೊಂಡರೆ ಶುಂಠಿ ಚಹಾ ಕುಡಿಯುವುದು ಉತ್ತಮ. ಏಕೆಂದರೆ ಶುಂಠೀ ದೇಹದಲ್ಲಿ ಉಷ್ಟತೆಯನ್ನು ಕಾಪಾಡಿಕೊಳ್ಳುತ್ತದೆ. ಇದರಿಂದ ಶೀತ ಮತ್ತು ನೆಗಡಿಯಿಂದ ದೂರವಿರಬಹುದು. ಶುಂಠಿಯಲ್ಲಿ ಉರಿಯೂತದ, ಬ್ಯಾಕ್ಟಿರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಇದು ದೇಹದ ಪ್ರತಿಕೆಯನ್ನು ಹೆಚ್ಚಿಸುತ್ತದೆ.
ಮುಟ್ಟಿನ ಸಮಸ್ಯೆಗೂ ಪರಿಹಾರ :- ಚಳಿಗಾಲದಲ್ಲಿ ಕೆಮ್ಮು, ನೆಗಡಿಗೆ ಶುಂಠಿ ಚಹಾ ಪ್ರಯೋಜನಕಾರಿ. ಹಾಗೆಯೇ ಈ ಚಹಾವು ಮಹಿಳೆಯರಿಗೆ ಮುಟ್ಟಿನ ತೊಂದರೆ ಮತ್ತು ನೋವುಗಳಿಂದ ಪಾರಾಗಲು ಸಹಾಯ ಮಾಡುತ್ತದೆ . ಶುಂಠಿ ಚಹಾ ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
ಅಲರ್ಜಿ ಮತ್ತು ಸೋಂಕಿನಿಂದ ಮುಕ್ತಿ :- ಶುಂಠೀ ಔಷಧೀಯ ಗುಣಗಳಿಂದ ಸಮೃದ್ದವಾಗಿದೆ. ಇದು ಸೋಂಕನ್ನು ಸಹ ತಡೆಯಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ದೇಹವನ್ನು ಯಾವುದೇ ರೀತಿಯ ಅಲರ್ಜಿ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.
ಶುಂಠಿ ಚಹಾವು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ. ಆದರೆ ಇದನ್ನು ಸಮತೋಲಿನ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಎಂಬುದು ನೆನಪಿರಲಿ. ಶುಂಠಿ ದೇಹದ ಉಷ್ಟತೆಯನ್ನು ಹೆಚ್ಚ್ಇಸುತ್ತದೆ. ಹೀಗಾಗಿ ಗರ್ಭಿಣಿಯರು ಅದನ್ನು ಮಿತವಾಗಿ ಬಳಸುವುದು ಉತ್ತಮ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?