Featured
ಚಂದ್ರಯಾನ 2 ಕಳುಹಿಸಿರೋ ಮೊದಲ ಚಿತ್ರ ಇದೇ ನೋಡಿ : ಚಿತ್ರದಲ್ಲಿ ಏನೇನು ಕಾಣ್ತಿದೆ ಗೊತ್ತಾ..?
ಇಸ್ರೋ : ಬಹು ನಿರೀಕ್ಷಿಸಿ ಚಂದ್ರಯಾನ 2 ಈಗಾಗಲೇ ಚಂದ್ರನ ಕಕ್ಷೆ ಸೇರಿದ್ದು ಗೊತ್ತೇ ಇದೆ. ಆದ್ರೀಗ ಇದೇ ಮೊದಲ ಬಾರಿಗೆ ಚಂದ್ರಯಾನ 2 ನೌಕೆ, ಚಂದ್ರನ ಮೇಲಿನ ಮೊದಲ ಫೋಟೋ ಕಳುಹಿಸಿದೆ. ಈ ಕುರಿತು ಇಸ್ರೋ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಫೋಟೋ ಕೂಡ ರಿಲೀಸ್ ಮಾಡಿದೆ.
ಇದೋ ನೋಡಿ, ಚಂದ್ರಯಾನ 2 ನೌಕೆಯಲ್ಲಿನ ವಿಕ್ರಮ್ ಲ್ಯಾಂಡರ್ ಕಳುಹಿಸಿರೋ ಫೋಟೋ ಎಂದು ಇಸ್ರೋ ಟ್ವೀಟ್ ಮಾಡಿದೆ. ಚಂದ್ರನ ಕಕ್ಷೆಯಿಂದ ಸರಿ ಸುಮಾರು 2650 ಕಿ.ಮೀ. ದೂರದಿಂದ ತೆಗೆದಿರೋ ಫೋಟೋ ಇದಾಗಿದೆ. ಈ ಫೋಟೋವನ್ನ ಆಗಸ್ಟ್ 21, 2019ರಂದು ತೆಗೆಯಲಾಗಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ಬಿಡುಗಡೆ ಮಾಡಿರೋ ಫೋಟೋದಲ್ಲಿ ಅಪೋಲೋ ಮತ್ತು ಮೇರ್ ಓರಿಯಂಟಲ್ ಪ್ರದೇಶ ಕಾಣ್ತಿದೆ. ಮೇರ್ ಓರಿಯಂಟಲ್ ಪ್ರದೇಶ, ಈ ಹಿಂದೆ ಸಂಶೋಧನೆ ವೇಳೆ ಕಂಡುಬಂದಿದ್ದು, ಇಲ್ಲಿ ನೀರಿನ ಅಂಶ ಇರಬಹುದು ಎನ್ನಲಾಗಿದೆ. ಇದನ್ನ ಮೇರ್ ಓರಿಯಂಟಲ್ ಜಲಾನಯನ ಪ್ರದೇಶ ಎನ್ನಲಾಗುತ್ತೆ. ಮತ್ತೊಂದು ಅಪೋಲೋ. ಈ ಹಿಂದೆ ನಾಸಾ ಅಪೋಲೋ ಹೆಸರಿನ ನೌಕೆಯನ್ನ ಚಂದ್ರನ ಮೇಲೆ ಕಳುಹಿಸಿತ್ತು. ಈ ವೇಳೆ, ಕೆಲವು ನಿಷ್ಕ್ರಿಯ ಧಾತುಗಳನ್ನ ಅದು ಕಂಡು ಹಿಡಿದಿತ್ತು. ಅದೇ ಪ್ರದೇಶಕ್ಕೆ ಅಪೋಲೋ ಅಂತಲೂ ಕರೀತಾರೆ.
ಈ ಎರಡು ಪ್ರದೇಶಗಳು ಚಂದ್ರಯಾನ 2 ನೌಕೆ ಸೆರೆ ಹಿಡಿದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?