Connect with us

Featured

ಗೋವಿಂದ ಗೋವಿಂದಾ..! : ತಿರುಪತಿಯಲ್ಲಿ ಆಂಧ್ರ ಸರ್ಕಾರದಿಂದಲೇ ಮತಾಂತರಕ್ಕೆ ಪ್ರೇರಣೆ..?

ತಿರುಮಲ/ತಿರುಪತಿ : ಹಿಂದೂಗಳ ಪವಿತ್ರ ಕ್ಷೇತ್ರ ತಿರುಪತಿ. ಈ ಮಾತಿನಲ್ಲಿ ಡೌಟೇ ಇಲ್ಲ. ಸಂಕಟ ಬಂದಾಗ ವೆಂಕಟರಮಣ ಅನ್ನೋದು ಸಾಮಾನ್ಯ. ಕಷ್ಟ, ಸುಖ ಏನೇ ಇದ್ರೂ, ತಿಮ್ಮಪ್ಪನ ಬಳಿ ಹೇಳಿದ್ರೆ ಒಂದ್ ರೀತಿ ನೆಮ್ಮದಿ. ಹೀಗಾಗಿಯೇ ಪ್ರತಿ ದಿನ ಲಕ್ಷಾಂತರ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ಹೋಗ್ತಾರೆ. ಆದ್ರೆ, ಇದೀಗ ತಿಮ್ಮಪ್ಪನ ಭಕ್ತರ ಆಕ್ರೋಶಕ್ಕೆ ಕಾರಣವಾಗುವಂತಹ ತಪ್ಪನ್ನು ಆಂಧ್ರ ಸರ್ಕಾರವೇ ಮಾಡಿದೆ.

ತಿರುಪತಿಯ ಆಂಧ್ರ ಬಸ್​​ಗಳಲ್ಲಿ ಮತಾಂತರಕ್ಕೆ ಪ್ರೇರಣೆ..?

ಇದೊಂದು ರೀತಿ ಅಚ್ಚರಿಯಾದ್ರೂ ಸತ್ಯ. ತಿರುಪತಿ, ತಿರುಮಲ ಬಸ್​​ಗಳಲ್ಲಿ, ಅದರಲ್ಲೂ ಆಂಧ್ರ ಸರ್ಕಾರದ ಎಪಿಎಸ್​ಆರ್​ಟಿಸಿ ಬಸ್​​ಗಳಲ್ಲೇ ಈ ರೀತಿಯ ದೊಡ್ಡ ಪ್ರಮಾದ ಆಗಿದೆ. ಪ್ರಯಾಣಿಕರಿಗೆ ನೀಡೋ ಟಿಕೆಟ್​ ಹಿಂಬದಿಯಲ್ಲಿ, ಕ್ರೈಸ್ತರ ಪವಿತ್ರ ಸ್ಥಳ ಜೆರುಸಲೆಂಗೆ ಹೋಗಿ. ಕಡಿಮೆ ದರದಲ್ಲಿ ಪ್ರಯಾಣಕ್ಕೆ ಎಲ್ಲಾ ವ್ಯವಸ್ಥೆ ಮಾಡೋದಾಗಿ ಜಾಹೀರಾತು ನೀಡಲಾಗಿದೆ. ಇದರ ಜೊತೆ ಮುಸ್ಲಿಮರ ಪವಿತ್ರ ಸ್ಥಳ ಹಜ್ ಯಾತ್ರೆಯನ್ನೂ ಕೈಗೊಳ್ಳಿ ಎಂದು ಟಿಕೆಟ್​ ಹಿಂಬದಿಯಲ್ಲಿ ಮುದ್ರಿಸಲಾಗಿದೆ.

ಸರ್ಕಾರಿ ಬಸ್​​ಗಳಲ್ಲೇ, ಅದು ತಿರುಪತಿಯಲ್ಲೇ ಈ ರೀತಿಯಾದ್ರೆ ಗತಿ ಏನು ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದಾರೆ. ಆದ್ರೆ, ಕಂಡಕ್ಟರ್​ ಹಾಗೂ ಡ್ರೈವರ್​ಗಳು ನಮಗೇನೂ ಗೊತ್ತಿಲ್ಲ. ಇಲಾಖೆ ನಮಗೆ ಕೊಟ್ಟಿದೆ ನಾವು ನಮ್ಮ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ.

Advertisement

ಸಾರಿಗೆ ಇಲಾಖೆ ಎದುರು ಬಿಜೆಪಿ ಪ್ರತಿಭಟನೆ

ತಿರುಪತಿಯಲ್ಲೇ ಇಷ್ಟೆಲ್ಲಾ ಅಪಚಾರ ಆಗ್ತಿದ್ದಂತೆ, ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಎಪಿಎಸ್​ಆರ್​ಟಿಸಿಯ ತಿರುಪತಿ ಘಟಕದ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಪ್ರಕರಣವನ್ನ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಟಿಡಿಪಿ ಸರ್ಕಾರದಲ್ಲೇ ಆಗಿದ್ದ ತಪ್ಪು..!

ಮತಾಂತರ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಕ್ರಿಯಿಸಿರೋ ಆಂಧ್ರ ಸರ್ಕಾರದ ಸಾರಿಗೆ ಮಂತ್ರಿ, ಬಸ್​ ಟಿಕೆಟ್​ಗಳು ಹಿಂದೆಯೇ ಮುದ್ರಣ ಗೊಂಡಿದ್ದವರು. ಹಿಂದಿನ ಟಿಡಿಪಿ ಸರ್ಕಾರ ಇದ್ದಾಗ ಆಗಿದ್ದ ಕಾಂಟ್ರಾಕ್ಟ್​ ಇನ್ನೂ ಮುಗಿದಿರಲಿಲ್ಲ. ಹೀಗಾಗಿ, ಈ ರೀತಿಯಾಗಿದೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ. ಇದನ್ನೇ ಕೆಲವು ಮಾಧ್ಯಮಗಳು, ಕೆಲವು ಪಟ್ಟಬದ್ಧ ಶಕ್ತಿಗಳು ನಮ್ಮ ವಿರುದ್ಧ ಕೆಲಸ ಮಾಡ್ತಿವೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಈ ಪ್ರಕರಣವನ್ನ ತನಿಖೆಗೆ ಒಪ್ಪಿಸಲಾಗಿದ್ದು, ನಿಜಾಂಶ ಹೊರಬೀಳಲಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.

Advertisement

ತಿರುಪತಿಯಲ್ಲಿ ಇದು ಹೊಸತೇನಲ್ಲ..!

ತಿರುಮಲ, ತಿರುಪತಿಯಲ್ಲಿ ಈ ಮತಾಂತರ ರೋಗ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಜಗನ್​ ಮುಖ್ಯಮಂತ್ರಿಯಾದ ಬಳಿಕ ಇದು ಮತ್ತಷ್ಟು ಜಾಸ್ತಿಯಾಗಿದೆ ಅನ್ನೋ ಮಾತು ಚರ್ಚೆಗೆ ಬಂದಿದೆ. ಹೀಗಾಗಿ, ಹಿಂದೂಗಳ ಪವಿತ್ರ ಸ್ಥಳ, ತೀರ್ಥ ಕ್ಷೇತ್ರವಾಗಿರೋ ತಿರುಪತಿಯನ್ನ ರಕ್ಷಿಸಿ ಅನ್ನೋ ವಾದ, ಹೋರಾಟಗಳು ಶುರುವಾಗಿವೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ