Featured
ಕ್ವಾರಿ ಮಾಡಲು ಭೂಮಿ ನೀಡದ ರೈತನ ಮೇಲೆ ಟ್ರ್ಯಾಕ್ಟರ್ ಹರಿಸಲು ಹೊರಟ ಮಾಜಿ ಶಾಸಕನ ಸಂಬಂಧಿ
![](https://risingkannada.com/wp-content/uploads/2019/09/ಜಜ.jpg)
ಮಂಡ್ಯ: ಮಾಜಿ ಸಚಿವ ಹಾಗೂ ನಾಗಮಂಗಲದ ಮಾಜಿ ಶಾಸಕ ಚಲುವರಾಯಸ್ವಾಮಿ ಸಂಬಂಧಿಕರು ರೈತನ ಮೇಲೆ ಟ್ರ್ಯಾಕ್ಟರ್ ಹರಿಸಲು ಮುಂದಾದ ಘಟನೆ ನಡೆದಿದೆ. ಉಮೇಶ್ ಎಂಬಾತ ಕಲ್ಲುಕ್ವಾರಿಗೆ ಭೂಮಿ ನೀಡಿಲ್ಲ ಎಂದು ರೈತ ಮರಿಗೌಡನ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಮುಂದಾಗಿದ್ದು ಧಮ್ಕಿ ಕೂಡ ಹಾಕಿದ್ದಾನೆ.
![](https://risingkannada.com/wp-content/uploads/2019/09/Untitled.jpg)
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಈ ಉಮೇಶ್ ಗಣಿಗಾರಿಕೆ ಮಾಡಲು ಅವಕಾಶ ತೆಗೆದುಕೊಂಡಿದ್ದ ಅದಕ್ಕೆ ಹೊಂದಿಕೊಂಡಂತೆ ಮರಿಗೌಡ ಎಂಬಾತನ ಜಮೀನು ಇದೆ, ಈ ಭೂಮಿಯನ್ನೂ ತನಗೆ ನೀಡುವಂತೆ ಹಲವು ಬಾರಿ ಧಮ್ಕಿ ಹಾಕಿದ್ದ, ಆದರೆ ಮರಿಗೌಡ ಮಾತ್ರ ಜಮೀನು ನೀಡದೇ ವ್ಯವಸಾಯ ಮಾಡಿಕೊಂಡಿದ್ದ, ಇದಕ್ಕೆ ಕುಪಿತನಾದ ಉಮೇಶ್ ತನ್ನ ಪ್ರಭಾವದಿಂದ ಮರಿಗೌಡನ ಹೊಲದಲ್ಲಿನ ತೆಂಗಿನ ಗಿಡಗಳು, ಡ್ರಿಪ್ ಪೈಪ್‌ಗಳನ್ನು ಕಿತ್ತು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗೂ ಮರಿಗೌಡ , ಅವರ ಮಗ, ಮಗಳು ತಾಯಿ, ಹೆಂಡತಿ ಮೇಲೆ ಟ್ರಾಕ್ಟರ್ ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
You may like
ಡಿಕೆಶಿ ಮನೆಯಲ್ಲಿ ವಿಶೇಷ ಸಭೆ- ಪಕ್ಷ ಸಂಘಟನೆ ಕುರಿತು ಚರ್ಚೆ
ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ- ಮಂಡ್ಯದಲ್ಲಿ ಸಚಿವರ ಬಿರುಸಿನ ಸಭೆ
SSLC ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ ಸಚಿವ ಡಾ. ನಾರಾಯಣ ಗೌಡ
ಲೇಡಿ ಎಸ್ಐ ಮೇಲೆ ಎಎಸ್ಐ ಹಲ್ಲೆ : ಮಂಡ್ಯದಲ್ಲಿ ಪೊಲೀಸರ ಕಿತ್ತಾಟ
ಡಿಕೆ ಶಿವಕುಮಾರ್ ದಕ್ಷಿಣ ಯಾತ್ರೆಗೆ ಭರ್ಜರಿ ಸ್ವಾಗತ : ಡಿಕೆಶಿ ಉದ್ದೇಶವಾದರೂ ಏನು.?
ಜನರೇ ನನಗೆ ಹೈಕಮಾಂಡ್ : ಬೈ ಎಲೆಕ್ಷನ್ನಲ್ಲಿ ಯಾರಿಗೆ ಸಪೋರ್ಟ್..? ಸುಮಲತಾ ಹೆಜ್ಜೆ ನಿಗೂಢ