Featured
ಕೆ.ಮಂಜು ಸಿನಿಮಾದಲ್ಲಿ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ : ಕನ್ನಡಕ್ಕೆ ಅಧಿಕೃತ ಎಂಟ್ರಿ ಕೊಟ್ಟ ನ್ಯಾಷನಲ್ ಕ್ರಶ್

ಬೆಂಗಳೂರು : ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಕಣ್ ಸನ್ನೆ ಮೂಲಕ ಒಂದೇ ಒಂದು ದಿನದಲ್ಲಿ ಇಡೀ ದೇಶಾದ್ಯಂತ ಫ್ಯಾನ್ ಫಾಲೋಯಿಂಗ್ ಪಡೆದು, ನ್ಯಾಷನಲ್ ಕ್ರಶ್ ಆದ ಹುಡುಗಿ. ಈ ಮಲಯಾಳಂ ಬೆಡಗಿ ಈಗ ಕನ್ನಡ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಗೆ ಸೂಚಿಸಿದ್ದಾಳೆ.
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಅಭಿನಯದ ವಿಷ್ಣು ಪ್ರಿಯಾ ಸಿನಿಮಾಗೆ ಈಗ ಪ್ರಿಯಾ ವಾರಿಯರ್ ನಾಯಕಿ. ಮಲಯಾಳಂನ ಒರು ಕಾದಲ್ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಪ್ರಿಯಾ ವಾರಿಯರ್, ಕೇವಲ ಒಂದೇ ಒಂದು ದೃಶ್ಯದ ಮೂಲಕ ಫೇಮಸ್ ಆಗಿ ಬಿಟ್ರು. ಸಿನಿಮಾ ಫ್ಲಾಪ್ ಆದರೂ, ಪ್ರಿಯಾಗೆ ಎಲ್ಲಾ ಭಾಷೆಗಳಲ್ಲೂ ಆಫರ್ಗಳು ಬರ್ತಿವೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಸೇರಿದಂತೆ ಮಲಯಾಳಂನಲ್ಲಿ ಬ್ಯುಸಿಯಾಗಿರೋ ಪ್ರಿಯಾ, ಈಗ ಕನ್ನಡ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.
ಇದೇ ಸೆಪ್ಟೆಂಬರ್ನಿಂದ ಶೂಟಿಂಗ್ ಶುರುವಾಗಲಿದ್ದು, ಪ್ರಿಯಾ ವಾರಿಯರ್ ಸಿನಿಮಾ ತಂಡವನ್ನ ಸೇರಿಕೊಳ್ಳಲಿದ್ದಾರೆ ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. ಇತ್ತೀಚೆಗಷ್ಟೇ ಶ್ರೇಯಸ್ ಮಂಜು ಅಭಿನಯದ ಪಡ್ಡೆಹುಲಿ, ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?