ಜ್ಯೋತಿಷ್ಯ
ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

ನಿದ್ರೆಯಲ್ಲಿ ಕನಸುಗಳು ಬರುವುದು ಸಾಮಾನ್ಯ. ಆದರೆ, ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ. ಒಂದೊಂದು ಕನಸು, ಸ್ವಪ್ನಕ್ಕೂ ಅದರದ್ದೇ ಆದ ಮಹತ್ವ ಇರುತ್ತೆ. ಇದನ್ನ ಸ್ವಪ್ನ ಫಲಗಳು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯಲಾಗುತ್ತೆ. ಇಷ್ಟಕ್ಕೂ ಯಾವ ಸ್ವಪ್ನ ಬಂದರೆ, ಏನೆಲ್ಲಾ ಫಲಗಳಿವೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರದ ಮೂಲಕ ನೋಡೋಣ..
ಸ್ವಪ್ನದಲ್ಲಿ ಕುದುರೆ ಬಂದರೆ, ಶುಭಫಲವಾಗುತ್ತದೆ. ಶುಭ ಪ್ರಯಾಣವಾಗುತ್ತದೆ. ಲಾಭದ ನಿರೀಕ್ಷೆ ಇರುತ್ತಂತೆ.
ಆನೆ : ಆನೆಗಳು ಆಹಾರ ತಿನ್ನುತ್ತಿರುವುದು, ಗುಂಪಾಗಿ ಇರುವ ಸ್ವಪ್ನ ಬಂದರೆ ಅತ್ಯಂತ ಶುಭ, ಐಶ್ವರ್ಯ ವೃದ್ಧಿ, ಸುಖ ಜೀವನದ ಸಂಕೇತ. ಆದ್ರೆ, ಆನೆಯು ಓಡಿಸಿಕೊಂಡು ಬಂದಂತೆ ಕನಸು ಕಂಡರೆ, ಸ್ವಲ್ಪ ಕಷ್ಟದ ಸಮಯ ಎಂದು ಅರ್ಥ.
ಗೋವು : ಗೋವುಗಳು ಸ್ವಪ್ನದಲ್ಲಿ ಬಂದರೆ, ಅತ್ಯಂತ ಶುಭ, ಇಷ್ಟಾರ್ಥ ಸಿದ್ಧಿ, ವ್ಯಾಪಾರ ವಹಿವಾಟಿನಲ್ಲಿ ಲಾಭ ಹಾಗೂ ಶುಭಕಾರ್ಯ ನಡೆಯುವ ಸಾಧ್ಯತೆ. ಆದ್ರೆ, ಹಸು ಒದೆಯುವುದು, ತುಂಬಾ ಜೋರಾಗಿ ಕೂಗುವ ಸ್ವಪ್ನ ಬಂದರೆ, ಅದು ಅಶುಭದ ಸಂಕೇತ.
ನರಿ : ನರಿ ಕಾಣಿಸಿದರೆ, ನಷ್ಟದ ಮುನ್ಸೂಚನೆ, ಸಂಕಟ ಎದುರಾಗುವ ಸಮಯ ಆಗಿರುತ್ತಂತೆ. ಎಚ್ಚರಿಕೆ ವಹಿಸುವುದು ಒಳ್ಳೆಯದ್ದು. ನಂಬಿದವರಿಂದ ಮೋಸವಾಗುವ ಸಂಕೇತ.
ಹಾವು : ನಾಗರಹಾವು ಹೆಡೆ ಎತ್ತಿ ಶಾಂತ ರೀತಿಯಿಂದ ನೋಡದರೆ ತುಂಬಾ ಶುಭ ಫಲ ಉಂಟಾಗುತ್ತದೆ. ಆದರೆ, ಬುಸುಗುಡುತ್ತಾ ಹೆಡೆ ಎತ್ತಿದರೆ, ಪದೇ ಪದೇ ಸ್ವಪ್ನದಲ್ಲಿ ಬರುತ್ತಿದ್ದರೆ, ಓಡಿಸಿಕೊಂಡು ಬಂದಂತೆ ಸ್ವಪ್ನ ಬಿದ್ದರೆ ಅದು ಅಶುಭವಾಗುತ್ತೆ. ದೋಷವನ್ನೂ ತೋರಿಸುತ್ತದೆ.
ಕಾಗೆ : ಕಾಗೆ ಸ್ವಪತ್ನದಲ್ಲಿ ಪದೇ ಪದೇ ಬರುತ್ತಿದ್ದರೆ ಅಶುಭ, ಕೆಲವೊಮ್ಮೆ ಪಿತೃ ದೋಷವಾಗಿರುತ್ತದೆ. ಅಶುಭ ಸಮಾಚಾರಗಳು ಬರಬಹುದು. ಪಿತೃ ಕಾರ್ಯಗಳು ಸರಿಯಾಗಿ ಮಾಡದೇ ಇದ್ದ ಸಮಯದಲ್ಲಿ ಹೀಗೆ ಕಾಗೆಗಳು ಹೆಚ್ಚು ಸ್ವಪ್ನದಲ್ಲಿ ಬರುತ್ತವೆ.
ದೀಪ : ಸ್ವಪ್ನದಲ್ಲಿ ದೀಪಗಳು ಬಂದರೆ ಶುಭ ಫಲವಾಗುತ್ತದೆ. ಆ ದೀಪ ಉರಿಯುತ್ತಿರಬೇಕು. ಆರಿದ ದೀಪ ಕಂಡರೆ ಅದು ಅಶುಭ ಆಗುತ್ತದೆ.
ಶವ ಮತ್ತು ಸಂಸ್ಕಾರ : ಶವ ಮತ್ತು ಸಂಸ್ಕಾರದ ಸ್ವಪ್ನ ಬಂದರೆ, ತನ್ನ ಶವ ಅಥವಾ ತನ್ನ ಪ್ರೀತಿಯ ಜನರ ಶವ ಅಥವಾ ಶವ ಸಂಸ್ಕಾರ ಮಾಡುವಂತ ಸ್ವಪ್ನ ಬಂದರೆ, ಅದು ತುಂಭಾ ಶುಭವಾಗುತ್ತದೆ. ಆಯಸ್ಸು ದೀರ್ಘವಾಗುತ್ದೆ. ಮೃತಪಟ್ಟ ಹಿರಿಯರು ಕನಸಿನಲ್ಲಿ ಬಂದರೆ ಅದು ಎಚ್ಚರಿಕೆಯ ಸಂಕೇತ, ಶ್ರಾದ್ಧ ಕಾರ್ಯಗಳು ಸರಿಯಾಗಿ ಮಾಡಬೇಕು.
ದೇವಾಲಯ : ದೇವಸ್ಥಾನಗಳು ಸ್ವಪ್ನದಲ್ಲಿ ಬಂದರೆ ಶುಭ ಲಕ್ಷಣ. ಅತಂಕ ವ್ಯಕ್ತಿ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಭಾಗವಹಿಸುವರು. ಸ್ಪಷ್ಟವಾಗಿ ದೇವಾಲಯ ಕಾಣದೇ ಇದ್ದರೆ ಅಥವಾ ದೇವರ ದರ್ಶನವಾಗದೇ ಇದ್ದರೆ ಯಾವುದೇ ದೇವರ ಹರಕೆ ಉಳಿದಿರುತ್ತದೆ. ಆ ಹರಕೆಯನ್ನು ತೀರಿಸಿ ಮತ್ತು ಮನೆ ದೇವರ ದರ್ಶನ ಅವಶ್ಯಕವಾಗಿ ಪಡೆಯಬೇಕು.
ಕೆಟ್ಟ ಕನಸುಗಳು ಪದೇ ಪದೇ ಬರುತ್ತಿದ್ದರೆ, ಅರಿಶಿನಕೊಂಬು ತಲೆಕೆಳಗಡೆ ಇಟ್ಟುಕೊಂಡು ಮಲಗಿದರೆ ಶುಭವಾಗುತ್ತದೆ.