Featured
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ನಂತರ ಮುನಿಯಪ್ಪ ಕಣ್ಣು
ಕೋಲಾರ: ಕೆಪಿಸಿಸಿ ಅಧ್ಯಕ್ಷ್ಯ ಸ್ಥಾನದ ಮೇಲೆ ಕೇಂದ್ರದ ಮಾಜಿ ಮಂತ್ರಿ ಕೆಎಚ್ ಮುನಿಯಪ್ಪ ಕಣ್ಣು ಕೂಡ ಬಿದ್ದಿದ್ಯಾ ಎಂಬ ಮಾತು ಕಾಂಗ್ರೆಸ್ ಆಪ್ತವಲಯದಲ್ಲಿ ಕೇಳಿಬರುತ್ತಿದೆ, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬರುವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ನಿಧಾನವಾಗಿ ಹೈಕಮಾಂಡ್ ಬಳಿ ದಿನೇಶ್ ಗುಂಡೂರಾವ್ ನಂತರ ನನ್ನನ್ನೇ ಅಧ್ಯಕ್ಷನ್ನಾಗಿ ಮಾಡಿ ಎಂದು ಮುನಿಯಪ್ಪ ಹೇಳಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸ್ಥಾನ ಮಾನ ಹಿನ್ನೆಲೆ ಈ ಬೇಡಿಕೆ ಇಟ್ಟಿರೊ ಕೆಎಚ್ ಮುನಿಯಪ್ಪ, ದಿನೇಶ್ ಗುಂಡೂರಾವ್ ಬದಲಾಯಿಸಿ ಎಂದು ನಾವು ಮನವಿ ಮಾಡಿಲ್ಲ, ಆದರೆ ಮುಂದಿನ ಅವಧಿಗೆ ನನಗೆ ಅವಕಾಶ ಮಾಡಿ ಕೊಡಿ ಎಂದು ವರಿಷ್ಠರ ಬಳಿ ಹೇಳಿದ್ದಾರೆ. ದಿನೇಶ್ ಗುಂಡೂರಾವ್ ತಕ್ಷಣಕ್ಕೆ ಅಧಿಕಾರ ತ್ಯಜಿಸ್ತಾರೋ ಇಲ್ಲವೋ, ಆದರೆ ಲಾಭಿಯಂತೂ ಜೋರಾಗಿಯೇ ನಡೆದಿದೆ.
You may like
ಕೆಪಿಸಿಸಿ ಅಧ್ಯಕ್ಷರಿಗೆ ಶುಭ ಕೋರಿದ ಮುಖಂಡರು- ಅಭಿಮಾನಕ್ಕಾಗಿ ಬಿಸಿಲಿನಲ್ಲೆ ಕುಳಿತು ಪದಗ್ರಹಣ ವೀಕ್ಷಣೆ
ಕೆಪಿಸಿಸಿಗೆ ನೂತನ ಸಾರಥಿ- ಪದಗ್ರಹಣ ಕಾರ್ಯಕ್ರಮ ಬೀದರ್ನಲ್ಲಿ ಲೈವ್ ವೀಕ್ಷಣೆ
ತೊಗರಿ ಗೋದಾಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು ಯಾರು..? ರೈತರು ಕಂಗಾಲು
ಯಾದಗಿರಿ ಕಾಂಗ್ರೆಸ್ ಕಚೇರಿಯಲ್ಲಿ ಡಿಕೆಶಿ ಪದಗ್ರಹಣ ವೀಕ್ಷಣೆ- ಹಲವು ಮುಖಂಡರಿಂದ ಜೈಕಾರ
ಬಿಳ್ಹಾರ್ ಗ್ರಾಮದಲ್ಲಿ ಡಿಕೆಶಿ ಪಟ್ಟಾಭಿಷೇಕ ವೀಕ್ಷಣೆ- ಬಸ್ಸುಗೌಡ ಬಿಳ್ಹಾರ್ರಿಂದ ಲೈವ್ ವ್ಯವಸ್ಥೆ
ಡಿಕೆಶಿ ಪದಗ್ರಹಣದ ಉಸ್ತುವಾರಿಯಾಗಿ ಶ್ರಮಿಸುತ್ತಿರುವ ಮಾಣಿಕರೆಡ್ಡಿ- ಸದ್ದಿಲ್ಲದೆ ಜನರ ಮನ ಗೆದ್ದಿರುವ ನಾಯಕ