ರೈಸಿಂಗ್ ಕನ್ನಡ : ಕ್ರಿಕೆಟಿಗ ಕೆ.ಎಲ್. ರಾಹುಲ್, ನಟಿ ಸೊನಾಲ್ ಚೌಹಾಣ್ ಲವ್ ಮಾಡ್ತಿದ್ದಾರಾ..? ಹೀಗೊಂದು ಸುದ್ದಿ ಸದ್ಯ ಕ್ರಿಕೆಟ್ ಹಾಗೂ ಸಿನಿಮಾ ವಲಯದಲ್ಲಿ ಜೋರು ಚರ್ಚೆ ಆಗ್ತಿದೆ. ಈ ಕುರಿತು ಮಾತ್ನಾಡಿರೋ ನಟಿ ಸೊನಾಲ್ ಚೌಹಾಣ್, ನನಗೆ ರಾಹುಲ್ ಜೊತೆ ಯಾವುದೇ ರೀತಿಯ ಸಂಬಂಧ ಇಲ್ಲ. ಅವರೊಬ್ಬರು ಒಳ್ಳೇ ಕ್ರಿಕೆಟರ್ ಜೊತೆಗೆ ಟ್ಯಾಲೆಂಟೆಡ್. ನೈಸ್ ಪರ್ಸನ್ ಎಂದು ಸ್ಪಷ್ಟ ಪಡಿಸಿದ್ದಾರೆ.
ಇಷ್ಟಕ್ಕೂ ಏನಾಯ್ತು ಅಂತ ನೋಡೋದಾದ್ರೆ, ಕೆ.ಎಲ್. ರಾಹುಲ್ ಕ್ರಿಕೆಟ್ಗಿಂತಲೂ ಇತೆರೆ ವಿವಾದ, ವಿಷಯಗಳಿಂದಲೇ ಸುದ್ದಿ ಆಗ್ತಿದ್ದಾರೆ. ಇತ್ತೀಚೆಗೆ ಮಹಿಳೆಯರ ಕುರಿತು ವಿವಾದಾತ್ಮಕ ಮಾತಾಡಿ, ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ರು. ಇದಲ್ಲದೆ ಹಲವು ಬಾಲಿವುಡ್ ತಾರೆಯರ ಜೊತೆ ರಾಹುಲ್ ಹೆಸರು ಕೇಳಿ ಬಂದಿತ್ತು. ಆಥಿಯಾ ಶೆಟ್ಟಿ, ನಿಧಿ ಅಗರ್ವಾಲ್, ಸೋನಮ್ ಬಜ್ವಾ ಸೇರಿದಂತೆ ಹಲವು ನಟಿಯರ ಜೊತೆ ರಾಹುಲ್ ಹೆಸರು ಥಳುಕು ಹಾಕಿಕೊಂಡಿತ್ತು. ಇತ್ತೀಚೆಗೆ ಆಕಾಂಕ್ಷ ರಂಜನ್ ಕಪೂರ್ ಅನ್ನೋ ಯುವತಿ ಜೊತೆ ಡೇಟಿಂಗ್ ಮಾಡ್ತಿರುವಂತೆ ಸುದ್ದಿಕೂಡ ಆಗಿತ್ತು.
ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಆಕಾಂಕ್ಷ ಕುರಿತು ರಾಹುಲ್ಗೆ ಪ್ರಶ್ನೆ ಕೇಳ್ತಿದ್ದಂತೆ, ಅದೆಲ್ಲಾ ಪರ್ಸನಲ್ ಎಂದಿದ್ರು. ಅಲ್ಲದೆ, ಇದೆಲ್ಲಾ ಮಾಧ್ಯಮಕ್ಕೆ ಬೇಡ. ವೈಯಕ್ತಿಕ ವಿಚಾರಗಳು ನಿಮಗ್ಯಾಕೆ ಎಂದು ರಾಹುಲ್ ಪ್ರಶ್ನೆ ಮಾಡಿ, ತಪ್ಪಿಸಿಕೊಂಡಿದ್ರು.
ಇದೀಗ, ನಟಿ ಸೊನಾಲ್ ಚೌಹಾಣ್ ಜೊತೆ ರಾಹುಲ್ ಹೆಸರು ಜೋರಾಗಿ ಕೇಳಿ ಬರ್ತಿದೆ. ಇವರಿಬ್ಬರ ಜೊತೆಗಿನ ಫೋಟೋಗಳು ಕೂಡ ವೈರಲ್ ಆಗ್ತಿವೆ. ಇದರಿಂದ ಕೊನೆಗೆ ನಟಿ ಸೊನಾಲ್ ತಾನಾಗಿಯೇ ಸ್ಪಷ್ಟನೆ ನೀಡಿದ್ದಾರೆ. ನನಗೆ ರಾಹುಲ್ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಒಳ್ಳೇ ಕ್ರಿಕೆಟರ್. ಟ್ಯಾಲೆಂಟೆಡ್, ನೈಸ್ ಪರ್ಸನ್ ಎಂದು ಸ್ಪಷ್ಟ ಪಡಿಸಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?