Featured
ಕೆಂಪೇಗೌಡನ ಮಗ ನಾನು, ಹೆದರಿ ಓಡಲ್ಲ..! ಷಡ್ಯಂತ್ರದ ಸಮನ್ಸ್‌ಗೆ ಉತ್ತರಿಸುತ್ತೇನೆ : ಡಿಕೆಶಿ
![](https://risingkannada.com/wp-content/uploads/2019/08/download-2.jpg)
ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಹಿನ್ನೆಲೆ ಸುದ್ದಿಗೋಷ್ಟಿ ನಡೆಸಿ ಮಾಧ್ಯಮಗಳಿಗೆ ತಮ್ಮ ಮೇಲಿನ ಆರೋಪ ಹಾಗೂ ಷಡ್ಯಂತ್ರದ ಬಗ್ಗೆ ವಿವರಿಸಿದರು.
ಮಾಧ್ಯಮಗಳನ್ನ ಕುರಿತು: ನಿಮಗೆಲ್ಲಾ ಅಭಿನಂದನೆಗಳು, ನೀವುಗಳೇ ನಿಮ್ಮ ರೀತಿಯಲ್ಲಿ ಕಲ್ಪನೆ ಮಾಡಿಕೊಂಡು ವಿವಿಧ ರೀತಿಯಲ್ಲಿ ನನ್ನ ಬಗ್ಗೆ ವ್ಯಾಖ್ಯಾನ ಮಾಡಿದ್ದೀರಿ, ಇದು ಮಾಧ್ಯಮದವರಾದ ನಿಮ್ಮಗಳ ಹಕ್ಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾಮೂಲು ನಾನು ಅದರ ಬಗ್ಗೆ ಮಾತನಾಡುವುದಿಲ್ಲ, ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತನಾಗಿ, ನಾಯಕನಾಗಿ, ಪಕ್ಷ ಕೊಟ್ಟ ಜವಾಬ್ದಾರಿಯನ್ನ ಪರಿಣಾಮಕಾರಿಯಾಗಿ ಮಾಡಿಕೊಂಡು ಬಂದಿದ್ದೇನೆ. ಗುಜರಾತ್ ಶಾಸಕರು, ಮಹಾರಾಷ್ಟ್ರ ಹಾಗೂ ನನ್ನ ರಾಜ್ಯದ ಶಾಸಕರನ್ನ ರಕ್ಷಣೆ ಮಾಡುವ ಜವಾಬ್ದಾರಿ ಕೊಟ್ಟಾಗ ತಪ್ಪದೇ ಮಾಡಿ ಮುಗಿಸಿದ್ದೇನೆ. ವಿರೋಧಗಳೇನೇ ಇರಲಿ ನನ್ನ ಕೆಲಸವನ್ನ ನಲವತ್ತು ವರ್ಷದಿಂದ ಮಾಡಿಕೊಂಡು ಬಂದಿದ್ದೇನೆ.
ನನ್ನ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನೇಲ್ಲಾ ಛೂ ಬಿಟ್ಟರು, ಫ್ಯಾಮಿಲಿಯನ್ನ ಟಾರ್ಗೆಟ್ ಮಾಡಿದರು. ನಾನು ಕಾನೂನು ಕಾಯ್ದೆಗಳಿಗೆ ಬೆಲೆ ನೀಡುವ ವ್ಯಕ್ತಿ, ನಾನು ದಾಖಲೆಗಳನ್ನೂ ಸಮಂಜಸವಾಗಿ ನೀಡಿದ್ದೇನೆ, ಅಗತ್ಯ ದಾಖಲೆಗಳು ಬೇಕಾದರೆ ಅವುಗಳನ್ನೂ ನೀಡುತ್ತೇನೆ. ಇದೆಲ್ಲಾ ನಾನು ನನ್ನ ಕುಟುಂಬ ಸಂಪಾದಿಸಿದ ಆಸ್ತಿ, ನನ್ನ ತಾಯಿಗೆ ಇನ್ನೊಬ್ಬ ಸಂಸದ ಮಗ ಇದ್ದಾನೆ, ಆದರೆ ನನ್ನ ಕನಕಪುರ ಮನೆಯನ್ನೂ ಸೇರಿಸಿ ಬೇನಾಮಿ ಆಸ್ತಿ ಅಂತ ಈ ಇಲಾಖೆಗಳು ತೀರ್ಮಾನ ಮಾಡಿದ್ದಾರೆ. ಆರ್ಥಿಕ ಅಪರಾಧ ನ್ಯಾಯಾಲಯದ ಮುಂದೆಯೂ ಹಾಜರಾಗಿದ್ದೇನೆ, ಅಲ್ಲಿನ ವಿಚಾರಣೆಗೆ ತಡೆಯಾಜ್ಞೆ ಸಿಕ್ಕಿದೆ. ಈ ಆಸ್ತಿಯ ಪಾಲುದಾರರು ನಮ್ಮೆಲ್ಲಾ ಕುಟುಂಬದವರು ಆದರೆ ಜಾರಿ ನಿರ್ದೇಶನಾಲಯ ಮಾತ್ರ ಒಪ್ಪುತ್ತಿಲ್ಲ, ಮುಂಬೈ ಹಾಗೂ ದೆಹಲಿಯಲ್ಲಿ ನನಗೆ ಫ್ಲ್ಯಾಟ್ ಗಳು ಇವೆ ಆದರೆ ಆಸ್ತಿಯೆಲ್ಲಾ ಬೆಂಗಳೂರು ಜಿಲ್ಲೆಯಲ್ಲೇ ಇದೆ, ಹಣಕ್ಕೂ ಜಾರಿ ನಿರ್ದೇಶನಾಲಯಕ್ಕೂ ಯಾವುದೇ ಸಂಬಂಧವಿಲ್ಲ, ದೇಶದ ಹೊರಗಡೆ ಬೇನಾಮಿ ವ್ಯವಹಾರ ಮಾಡಿಲ್ಲ. ನಾನು ತಪ್ಪು ಮಾಡಿಲ್ಲ, ಲಂಚ ಹೊಡೆದಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಕಾನೂನು ಪ್ರಕಾರ ವ್ಯವಹಾರ ಮಾಡಿದ್ದೇನೆ, ಗೌರವದಿಂದ ಬದುಕಿದ್ದೇನೆ, ಯಾವುದಕ್ಕೂ ಹೆದರುವುದಿಲ್ಲ, ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇನೆ ಎಂದರು
You may like
ಕಾಂಗ್ರೆಸ್ನಲ್ಲಿ ಚುರುಕಾಯಿತು ಪಕ್ಷ ಸಂಘಟನೆ- ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಸೈಕಲ್ ಏರಿದ ಕಾಂಗ್ರೆಸ್ ನಾಯಕರು- ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜಾಥಾ- ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?