Featured
ಕುರುಕ್ಷೇತ್ರ ದರ್ಶನಕ್ಕೆ ಗಂಟೆಗಳಷ್ಟೇ ಬಾಕಿ : ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಬಹುತಾರಾಗಣದ 100 ಕೋಟಿ ವೆಚ್ಚದ ಸಿನಿಮಾ. ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ಸಿದ್ಧವಾಗಿ, ಕನ್ನಡ, ತೆಲುಗಿನಲ್ಲಿ ಶುಕ್ರವಾರ ತೆರೆ ಕಾಣ್ತಿರೋ ಸಿನಿಮಾ. ಬಹುಭಾಷೆಯ ದಿಗ್ಗಜ ನಟರಿರುವ ಮೆಗಾ ಸಿನಿಮಾ. ಮೊಟ್ಟ ಮೊದಲ 3ಡಿ ಪೌರಾಣಿಕ ಸಿನಿಮಾ.. ಹೀಗೆ ಒಂದೇ ಎರಡನೇ.. ಹತ್ತು ಹಲವು ವಿಶೇಷತೆಗಳಿರೋ ಸಿನಿಮಾ ಕುರುಕ್ಷೇತ್ರ.
ಕುರುಕ್ಷೇತ್ರವನ್ನ ಕಣ್ತುಂಬಿಕೊಳ್ಳಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ಗುರುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ವಿವಿಧ ಕಡೆ ಶೋಗಳು ಶುರುವಾಗುತ್ವೆ. ಅಧಿಕೃತವಾಗಿ ಶುಕ್ರವಾರ ಬಿಡುಗಡೆ ಅಂತ ಹೇಳ್ತಿದ್ರೂ, ಈಗಾಗಲೇ ಗುರುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಬುಕ್ಕಿಂಗ್ ಆರಂಭಗೊಂಡಿದೆ. ಅದರಲ್ಲೂ ದರ್ಶನ್ ಫ್ಯಾನ್ಸ್ ಅಂತೂ ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದು, ಇದು ಚಾಲೆಂಜಿಂಗ್ ಸ್ಟಾರ್ ಅಭಿನಯದ 50ನೇ ಸಿನಿಮಾ ಅನ್ನೋದು ವಿಶೇಷ. ಹೀಗಾಗಿಯೇ ವಿಶೇಷ ಕಾಳಜಿ ವಹಿಸಿ, ನಟ ದರ್ಶನ್ ನಟಿಸಿದ್ದಾರೆ. ಇಷ್ಟೇ ಅಲ್ಲದೆ, ರೆಬಲ್ಸ್ಟಾರ್ ಅಂಬರೀಶ್ ಅಭಿನಯದ ಕೊನೇ ಸಿನಿಮಾ ಇದು. ಅಂಬಿ ಭೀಷ್ಮನ ಪಾತ್ರ ಮಾಡಿರೋದು ವಿಶೇಷ.
ಇನ್ನು, ರವಿಚಂದ್ರನ್ ಕೃಷ್ಣನ ಪಾತ್ರ ಮಾಡಿದ್ರೆ, ಸೋನು ಸೂದ್ ಅರ್ಜುನನ ರೋಲ್ ಹಾಗೂ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ. ಅರ್ಜುನ್ ಸರ್ಜಾ, ರವಿಶಂಕರ್, ಮೇಘನಾ ರಾಜ್, ಹರಿಪ್ರಿಯಾ, ಸ್ನೇಹ… ಹೀಗೆ ನಟ-ನಟಿಯರ ಲಿಸ್ಟ್ ದೊಡ್ಡದಾಗಿ ಸಾಗುತ್ತಿದೆ. ಹೀಗಾಗಿಯೇ ಕುರುಕ್ಷೇತ್ರ ಸಿನಿಮಾ ಸಾಕಷ್ಟು ವಿಶೇಷತೆಗಳಿಗೆ ಕಾರಣವಾಗಿದೆ.
ಇನ್ನೇನು ಕೆಲವೇ ಗಂಟಗಳಲ್ಲಿ ಕುರುಕ್ಷೇತ್ರ ದರ್ಶನ ಆಗಲಿದ್ದು, ಸಿನಿಮಾ ಹೇಗಿದೆ ಅನ್ನೋದು ಗೊತ್ತಾಗಲಿದೆ. ಆಲ್ ದಿ ಬೆಸ್ಟ್ ಕುರುಕ್ಷೇತ್ರ ಟೀಮ್..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?