Featured
ಕುರುಕ್ಷೇತ್ರ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗ್ತಿಲ್ಲ ಯಾಕೆ..?

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹು ತಾರಾಹಣದ ಬಹುಕೋಟಿ ವೆಚ್ಚದ ಕುರುಕ್ಷೇತ್ರ ಸಿನಿಮಾ ಇದೇ ಆಗಸ್ಟ್ 9ಕ್ಕೆ ಬಿಡುಗಡೆ ಆಗ್ತಿದೆ. ಆದ್ರೆ, ವರಲಕ್ಷ್ಮೀ ಹಬ್ಬದ ದಿನ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗ್ತಿದ್ದು, ಉಳಿದ ಮೂರು ಭಾಷೆಗಳಲ್ಲಿ ಬಿಡುಗಡೆ ಆಗ್ತಿಲ್ಲ ಎಂದು ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ, ಕನ್ನಡ ಹಾಗು ತೆಲುಗಿನಲ್ಲಿ ಇದೇ ಶುಕ್ರವಾರ ಅಂದ್ರೆ ಆಗಸ್ಟ್ 9ಕ್ಕೆ ಬಿಡುಗಡೆ ಆಗ್ತಿದೆ. ಆದ್ರೆ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಎರಡು ವಾರಗಳ ಬಳಿಕ ಬಿಡುಗಡೆ ಆಗುತ್ತೆ ಅಂತ ಹೇಳಿದ್ರು. ಇವತ್ತು ಅಂದ್ರೆ, ಶನಿವಾರದಿಂದಲೇ ಕುರುಕ್ಷೇತ್ರ ಸಿನಿಮಾದ ಬುಕ್ಕಿಂಗ್ ಆರಂಭವಾಗಿದೆ ಅಂತ ಮುನಿರತ್ನ ಮಾಹಿತಿ ನೀಡಿದ್ರು.
ಕುರುಕ್ಷೇತ್ರ ಸಿನಿಮಾ 3ಡಿ, 2ಡಿಯಲ್ಲಿ ರಿಲೀಸ್ ಆಗ್ತಿದೆ. ದರ್ಶನ್ ಅಭಿನಯದ 50ನೇ ಸಿನಿಮಾ ಅನ್ನೋ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂಭ್ರಮ. ಇನ್ನು, ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ ಕೊನೇ ಸಿನಿಮಾ ಇದಾಗಿದೆ. ಇದರ ಜೊತೆ ರವಿಚಂದ್ರನ್, ರವಿಶಂಕರ್, ಅರ್ಜುನ್ ಸರ್ಜಾ, ಶಶಿಕುಮಾರ್, ಸೋನುಸೂದ್, ನಿಖಿಲ್ ಕುಮಾರ್, ಮೇಘನಾ ರಾಜ್, ಹರಿಪ್ರಿಯಾ, ಸ್ನೇಹ ಸೇರಿದಂತೆ ತಾರೆಯರ ದಂಡೇ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?