Featured
ಕಾಲಚಕ್ರ ಉರುಳುತ್ತೆ, ತಾಯಿ ಕಣ್ಣೀರ ಶಾಪ ತಟ್ಟುತ್ತೆ : ಮೋದಿ-ಶಾಗೂ ಇದೇ ಗತಿ ಬರುತ್ತೆ : ಹೆಚ್ಡಿಕೆ ಈ ಮಾತು ಹೇಳಿದ್ದು ಯಾಕೆ..?

ಕನಕಪುರ/ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಜೋಡೆತ್ತು ಎಂದೇ ಖ್ಯಾತಿ ಪಡೆದಿದ್ದವರು ಹೆಚ್ಡಿಕೆ-ಡಿಕೆಶಿ. ಸಮ್ಮಿಶ್ರ ಸರ್ಕಾರವನ್ನ ಕಾಪಾಡಿಕೊಂಡು ಬಂದಿದ್ದೇ ಡಿಕೆಶಿ ಅಂದ್ರೆ ತಪ್ಪಲ್ಲ. ಆದ್ರೀಗ ಡಿಕೆಶಿ ಇಡಿ ವಶದಲ್ಲಿದ್ದಾರೆ. ಇದರಿಂದ ಡಿಕೆಶಿ ಕುಟುಂಬ ಕಣ್ಣೀರಲ್ಲಿ ದಿನ ಕಳೆಯುವಂತಾಗಿದೆ. ಅದರಲ್ಲೂ ಡಿಕೆಶಿ ತಾಯಿ ಗೌರಮ್ಮ, ದಿನ ಕಣ್ಣೀರು ಇಡ್ತಿದ್ದಾರೆ. ಇವತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಕನಕಪುರದ ಕೋಡಿಹಳ್ಳಿಗೆ ಭೇಟಿ ನೀಡಿ, ಡಿಕೆಶಿ ತಾಯಿ ಗೌರಮ್ಮ ಅವರಿಗೆ ಧೈರ್ಯ ತುಂಬಿದರು.
ಹೆಚ್.ಡಿ.ಕುಮಾರಸ್ವಾಮಿ ಭೇಟಿ ವೇಳೆ ಕಣ್ಣೀರಿಟ್ಟ ಡಿಕೆಶಿ ತಾಯಿ ಗೌರಮ್ಮ, ಮಗನ ಸ್ಥಿತಿಯನ್ನ ನೆನಪಿಸಿಕೊಂಡು ಭಾವುಕರಾದ್ರು, ಕಣ್ಣೀರಿಟ್ರು. ಡಿಕೆಶಿ ತಾಯಿ ಗೌರಮ್ಮ ಅವರ ಕಣ್ಣೀರು ನೋಡಿದ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಕೆಲ ಕಾಲ ಭಾವುರಾದ್ರು. ಇದೇ ವೇಳೆ ಮಾತ್ನಾಡಿದ ಹೆಚ್ಡಿಕೆ, ಕಾಲಚಕ್ರ ಹೀಗೆಯೇ ಇರೋಲ್ಲ. ಬದಲಾಗುತ್ತೆ. ತಾಯಿ ಕಣ್ಣೀರ ಶಾಪ ಅವರಿಗೂ ತಟ್ಟುತ್ತೆ. ಮೋದಿ-ಅಮಿತ್ ಶಾಗೂ ಮುಂದೆ ಇದೇ ಗತಿ ಬರುತ್ತೆ ಎಂದು ಹೆಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದ್ರು.
ಯಾವುದೇ ತಪ್ಪು ಮಾಡದೇ ಇದ್ರೂ, ದ್ವೇಷ ರಾಜಕೀಯದಿಂದ ಡಿಕೆಶಿ ಅವರನ್ನ ಬಂಧಿಸಿ, ಇಡಿ ವಶಕ್ಕೆ ಒಪ್ಪಿಸಲಾಗಿದೆ. ಬಿಜೆಪಿ ದ್ವೇಷ ರಾಜಕಾರಣ ಮಾಡ್ಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಇದ್ರೂ, ಯಾರೂ ಕೇರ್ ಮಾಡ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ರು ಹೆಚ್ಡಿಕೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















