Featured
ಕಾಜಲ್ ಅಗರ್ವಾಲ್ ಪರಿಸ್ಥಿತಿ ಇಷ್ಟೊಂದು ದಾರುಣನಾ..? ಕೋಟಿಗಳಿಂದ ಲಕ್ಷಕ್ಕೆ..
ರೈಸಿಂಗ್ ಕನ್ನಡ ಸಿನಿಮಾ : ಸೌತ್ ಸಿನಿ ಇಂಡಸ್ಟ್ರಿಯ ಟಾಪ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿರೋ ನಟಿ ಕಾಜಲ್ ಅಗರ್ವಾಲ್. ಸೀನಿಯರ್ ನಟರಿಂದ ಹಿಡಿದು, ಜ್ಯೂನಿಯರ್ ನಟರೊಂದಿಗೆ ನಟಿಸಿರೋ ನಟಿ ಕಾಜಲ್ಗೆ ಸದ್ಯ ತೆಲುಗಿನಲ್ಲಿ ಅಷ್ಟಾಗಿ ಆಫರ್ಗಳಿಲ್ಲ.
ಇತ್ತೀಚೆಗೆ ಕಾಜಲ್ ನಟಿಸಿದ್ದ ಸಿನಿಮಾಗಳು ಹೇಳಿಕೊಳ್ಳುವಂತಹ ಹಿಟ್ ಕೂಡ ಆಗಿಲ್ಲ. ಆಫರ್ಗಳು ಇಲ್ಲದೇ ಕಂಗಾಲಾಗಿರೋ ಈ ಬ್ಯೂಟಿ, ಸದ್ಯ ತಮಿಳಿನಲ್ಲಿ ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ಇಂಡಿಯನ್ 2 ಸಿನಿಮಾಗೆ ದುಬಾರಿ ಸಂಭಾವನೆ ಪಡೆದಿದ್ದಾರಂತೆ. ಆದ್ರೆ, 30 ವರ್ಷ ಮೀರಿದರೂ ಈಗಲೂ ಕಾಜಲ್ಗೆ ಕ್ರೇಜ್ ಇದೆ. ಈ ಮಧ್ಯೆ, ತೆಲುಗು, ತಮಿಳಿನ ಜೊತೆ ಹಿಂದಿಯಲ್ಲೂ ಒಂದು ಕೈ ನೋಡಿರೋ ಕಾಜಲ್ ಅಲ್ಲಿ ಅಷ್ಟಾಗಿ ಸಕ್ಸಸ್ ಆಗಿಲ್ಲ. ಆದ್ರೂ, ಜಾನ್ ಅಬ್ರಾಹಂ ಜೊತೆ ಹಿಂದಿಯಲ್ಲಿ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ.
ತೆಲುಗು, ತಮಿಳಿನಲ್ಲಿ ಕೋಟಿಗೂ ಹೆಚ್ಚು ಸಂಭಾವನೆ ಪಡೆಯೋ ಕಾಜಲ್, ಹಿಂದಿಯಲ್ಲಿ ಮಾತ್ರ ಕೇವಲ 30 ಲಕ್ಷಕ್ಕೆ ಸಿನಿಮಾ ಮಾಡೋದಾಗಿ ಒಪ್ಪಿಕೊಂಡಿದ್ದಾರಂತೆ.
ಕಥೆ ತುಂಬಾ ಇಷ್ಟವಾಯ್ತು. ಹೀಗಾಗಿ, ಕಡಿಮೆ ಸಂಭಾವನೆಗೆ ಒಪ್ಪಿಕೊಂಡೆ ಅಂತ ಕಾಜಲ್ ಹೇಳ್ತಿದ್ದಾರೆ. ಆದ್ರೆ, ಜಾನ್ ಅಬ್ರಾಹಂ ಜೊತೆ ನಟಿಸೋ ಆಸೆಯಿಂದಲೇ ಕಾಜಲ್ ಕಡಿಮೆ ಸಂಭಾವನೆಗೆ ಒಪ್ಪಿಕೊಂಡಿದ್ದಾರೆ ಎಂದು ಆಪ್ತರು ಹೇಳ್ತಿದ್ದಾರೆ. ಅದೇನೇ ಆಗ್ಲಿ, 2 ಕೋಟಿ ತೆಗೆದುಕೊಳ್ತಿದ್ದ ಕಾಜಲ್, 30 ಲಕ್ಷಕ್ಕೆ ಒಪ್ಪಿಕೊಂಡಿದ್ದು ಅಚ್ಚರಿ ಅಂತಿದ್ದಾರೆ ಸಿನಿ ಪಂಡಿತರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?