Featured
ಕಳೆದ ಸಂಪರ್ಕ ಮರು ಸ್ಥಾಪನೆಗೆ ಯತ್ನ..? ಲ್ಯಾಂಡರ್ ಇಮೇಜ್ ಇಸ್ರೋ ಪಾಲಿಗೆ ಭರವಸೆಯ ಬೆಳ್ಳಿಕಿರಣ..?

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹಾತ್ವಾಕಾಂಕ್ಷೆಯ ಚಂದ್ರಯಾನ ೨ರ ಲ್ಯಾಂಡರ್ ʻವಿಕ್ರಮ್ʼ ಕೊನೆ ಕ್ಷಣದಲ್ಲಿ ಸಂಪರ್ಕ ಮೊಟಕುಗೊಳಿಸಿಕೊಂಡು ಕಾಣೆಯಾಗಿದ್ದು ಇಸ್ರೋ ವಿಜ್ಞಾನಿಗಳು ಅದರ ಜೊತೆ ಸಂಪರ್ಕ ಸಾಧಿಸಲು ದತ್ತಾಂಶಗಳನ್ನ ಕಲೆಹಾಕುತ್ತಿದ್ದಾರೆ.
ಈ ಮಧ್ಯೆ ಇಸ್ರೋ ಮುಖ್ಯಸ್ಥ ಕೆ.ಶಿವನ್ ನ್ಯೂಸ್ ಏಜೆನ್ಸಿಗಳಿಗೆ ಮಾಹಿತಿ ನೀಡಿ ಕಳೆದುಹೊದ ವಿಕ್ರಮ್ , ಚಂದ್ರನ ಮೇಲ್ಮೈಲ್ಲಿ ತಿರುಗುತ್ತಿರುವ ಫೋಟೋ ದೊರೆತಿದೆ, ಅದರ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ. Indian Space Research Organisation (ISRO) Chief, K Sivan to ANI:We've found the location of #VikramLander on lunar surface&orbiter has clicked a thermal image of Lander. But there is no communication yet. We are trying to have contact. It will be communicated soon. #Chandrayaan2 pic.twitter.com/1MbIL0VQCo— ANI (@ANI) September 8, 2019
ವೈಫಲ್ಯ ಅವಲೋಕನ ಸಮಿತಿ ( ಫೇಲ್ಯೂರ್ ಅನಾಲಿಸೀಸ್ ಕಮಿಟಿ) ವಿಕ್ರಮ್ ಕಣ್ಮರೆಯಾಗಲು ಕಾರಣವನ್ನ ಹುಡುಕುತ್ತಿದೆ. ಚಂದ್ರನ ಮೇಲ್ಮೈ ಪ್ರತಿಕೂಲ ವಾತಾವರಣಕ್ಕೆ ಹೆದರಿ ವಿಕ್ರಮ್ ಸ್ತಬ್ಧವಾಗಿರಬೇಕು, ಮಾಡ್ರಿಡ್‌ನಲ್ಲಿರುವ ನಾಸಾದ ಡೀಪ್ ಸ್ಪೇಸ್ ನೆಟ್ವರ್ಕ್ ಸೆಂಟರ್ ಹಾಗೂ ಮಾರಿಷಸ್ ನಲ್ಲಿರುವ ಇಸ್ರೋದ ಕೇಂದ್ರದಿಂದ ವಿಕ್ರಮ್ ಸಂಪರ್ಕಕ್ಕೆ ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ದತ್ತಾಂಶಗಳನ್ನ ಪಡೆದುಕೊಂಡಿದ್ದು ಅವುಗಳ ಅವಲೋಕನದಿಂದ ವಿಕ್ರಮ್ ಇರುವ ಜಾಗ ಪತ್ತೆಹಚ್ಚಿ ಸಂಪರ್ಕ ಸಾಧಿಸುವ ಅವಕಾಶ ಇದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.
You may like

ಸುಸ್ಥಿಯಲ್ಲಿ ಚಂದ್ರಯಾನ -2 ಪ್ರಗ್ಯಾನ್ ರೋವರ್ ನೌಕೆ: ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚಿದ ಚೆನ್ನೈ ವಿಜ್ಞಾನಿ ಷಣ್ಮುಗ

ವಿಕ್ರಮ್ ಲ್ಯಾಂಡರ್ ಕಣ್ಮರೆಯಾದ ಜಾಗದಲ್ಲಿ ನಾಸ ಶೋಧನೆ: ನಾಳೆಯಿಂದ ಆರಂಭ

ಹೆಲೋ ವಿಕ್ರಮ್ : ನಾಸದಿಂದ ನಿಸ್ತೇಜ ಲ್ಯಾಂಡರ್ಗೆ ಸಂದೇಶ ರವಾನೆ

ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು

130 ಕೋಟಿ ಜನರ ನಿರೀಕ್ಷೆ, ನಾನೂ ಭಾಗಿ, ನಿಮ್ಮ ಫೋಟೋ ರೀ ಟ್ವೀಟ್ ಮಾಡ್ತೀನಿ : ಪ್ರಧಾನಿ

ಪ್ರವಾಹ ಅವಲೋಕನ ಮಾಡದ ಪ್ರಧಾನಿ ಚಂದ್ರಯಾನ ಸ್ಪರ್ಶ ವೀಕ್ಷಿಸಲು ಆಗಮನ: ಕಾಂಗ್ರೆಸ್ ಫ್ಲೆಕ್ಸ್
















