Featured
ಕನ್ನಡಿಗರ ಹೆಮ್ಮೆ ಸಾಲುಮರದ ತಿಮ್ಮಕ್ಕ ಅವರಿಗೆ JFW ಪ್ರಶಸ್ತಿ : ರಶ್ಮಿಕಾ ಮಂದಣ್ಣ ಅಲ್ಲೇನು ಮಾಡ್ತಿದ್ರು ಗೊತ್ತಾ.?
![](https://risingkannada.com/wp-content/uploads/2019/09/rashmika-timmakka.jpg)
ಚೆನ್ನೈ : ಕನ್ನಡಿಗರ ಹೆಮ್ಮೆ ಸಾಲುಮರದ ತಿಮ್ಮಕ್ಕ ಅವರಿಗೆ ಮತ್ತೊಂದು ಗೌರವ ಸಿಕ್ಕಿದೆ. ಚೆನ್ನೈನಲ್ಲಿ ಪ್ರತಿ ವರ್ಷ ಪ್ರದಾನ ಮಾಡುವ ಮಹಿಳಾ ಸಾಧಕಿಯರ ಪ್ರಶಸ್ತಿಯನ್ನ ಈ ಬಾರಿ ಜೀವಮಾನ ಸಾಧನೆಗಾಗಿ ನಮ್ಮ ಹೆಮ್ಮೆಯ ಸಾಲುಮರದ ತಿಮ್ಮಕ್ಕ ಅವರಿಗೆ ಸಿಕ್ಕಿದೆ. JFW ಹೆಸರಲ್ಲಿ ಈ ಪ್ರಶಸ್ತಿಯನ್ನ ಕಳೆದ 11 ವರ್ಷಗಳಿಂದ ಸಾಧಕಿಯರಿಗೆ ನೀಡಲಾಗ್ತಿದೆ. JFW ಅಂದ್ರೆ, ಜಸ್ಟ್ ಫಾರ್ ವುಮೆನ್ ಎಂದು.
ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಸಾಧಕಿಯರನ್ನ ಗುರುತಿಸಿ, ಪ್ರತಿವರ್ಷ ಈ ಪ್ರಶಸ್ತಿಯನ್ನ ನೀಡಲಾಗುತ್ತೆ. ಈ ಮೂಲಕ ಮಹಿಳೆಯರಿಗೆ ಗೌರವ ನೀಡುವಂತಹ ಕೆಲಸವನ್ನ JFW ಮಾಡ್ತಿದೆ. The awardee for excellence in social service, Saalumarada Thimmakka is here! She is 106-years-old and is absolutely energetic! #JFWAwards pic.twitter.com/ghUpu31KdU— JFW (@jfwmagofficial) August 31, 2019
ಸಾಲುಮರದ ತಿಮ್ಮಕ್ಕ ಜೊತೆ ರಶ್ಮಿಕಾ ಮಂದಣ್ಣ..!
ಚೆನ್ನೈನಲ್ಲಿ ನಡೆದ ಪ್ರಶಸ್ತಿ
ಪ್ರದಾನ ಸಮಾರಂಭದಲ್ಲಿ ಸಾಲುಮರದ ತಿಮ್ಮಕ್ಕ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡ್ರು. ಯಾಕಂದ್ರೆ,
ವೇದಿಕೆ ಮೇಲೆ ಗೌರವ ಸ್ವೀಕರಿಸಿದ ತಿಮ್ಮಕ್ಕ, ನಮ್ಮ ಕನ್ನಡದಲ್ಲಿ ಮಾತನಾಡಿದ್ರು. ಕನ್ನಡದಿಂದ ಇಂಗ್ಲೀಷ್ಗೆ
ಟ್ರಾನ್ಸ್ಲೇಷನ್ ಅಂದ್ರೆ, ತರ್ಜುಮೆ ಮಾಡಿದ್ದು ರಶ್ಮಿಕಾ. ಸಾಲುಮರದ ತಿಮ್ಮಕ್ಕ ಹೇಳಿದ ಪ್ರತಿಯೊಂದು
ಪದವನ್ನ ಕನ್ನಡದಿಂದ ಇಂಗ್ಲೀಷ್ಗೆ ತರ್ಜುಮೆ ಮಾಡಿ ಅಲ್ಲಿದ್ದವರ ಮನ ಗೆದ್ದು ಭೇಷ್ ಎನಿಸಿಕೊಂಡ್ರು
ರಶ್ಮಿಕಾ ಮಂದಣ್ಣ. ಇತ್ತೀಚೆಗಷ್ಟೇ ಕನ್ನಡ ಮಾತ್ನಾಡೋದು ಕಷ್ಟ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ರಶ್ಮಿಕಾ, ಬಹುಶಃ ಇದರಿಂದ
ಕವರ್ ಮಾಡಿಕೊಳ್ಳಬಹುದೇನೋ..
ದಿಗ್ಗಜರ ಸಮಾಗಮ..!
JFW ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ದಿಗ್ಗಜರು ಒಂದಾಗಿದ್ರು. ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಸೇರಿದಂತೆ ಖ್ಯಾತ ನಟಿಯರು, ಗಾಯಕಿಯರು ಸೇರಿದಂತೆ ಸಾಧಕಿಯರ ಸಮಾಗಮಕ್ಕೆ ಈ ವೇದಿಕೆ ಸಾಕ್ಷಿಯಾಯ್ತು.
![](https://risingkannada.com/wp-content/uploads/2019/09/kamal-768x1024.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?