Featured
ಕನ್ನಡಿಗರಾಗಿ ಹುಟ್ಟಿರೋದೇ ತಪ್ಪಾ..? ಕನ್ನಡಿಗರು ಎಲ್ಲವನ್ನೂ ಸಹಿಸಿಕೊಳ್ಳಬೇಕಾ..? ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಮನವಿಗೆ ಬೆಲೆ ಇಲ್ವಾ..?
![](https://risingkannada.com/wp-content/uploads/2019/09/flaf.jpg)
ನವದೆಹಲಿ/ಬೆಂಗಳೂರು : ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಎರಡೂ ಕಡೆ ಒಂದೇ ಸರ್ಕಾರ ಇದ್ರೆ, ಪ್ರಯೋಜನಕ್ಕಿಂತ ಅವಮಾನ, ಅಪಮಾನ, ಅನ್ಯಾಯವೇ ಹೆಚ್ಚು ಆಗುತ್ತಾ ಅನ್ನೋ ಅನುಮಾನ ಕಾಡ್ತಿದೆ. ಯಾಕಂದ್ರೆ, ಕೇಂದ್ರ ಬಿಜೆಪಿ ಸರ್ಕಾರ ಮಾಡ್ತಿರೋ ಮಲತಾಯಿ ಧೋರಣೆ. ಇದು ಮಲತಾಯಿ ಧೋರಣೆ ಅಂತ ಗೊತ್ತಿದ್ರೂ, ಬಾಯಿಮುಚ್ಚಿ ಕುಳಿತಿರೋ ರಾಜ್ಯ ಬಿಜೆಪಿ ಸರ್ಕಾರ ಹಾಗೂ ರಾಜ್ಯದ 25 ಬಿಜೆಪಿ ಸಂಸದರು.
ಸ್ವತಃ ಹಣಕಾಸು ಸಚಿವೆಯಾಗಿರೋ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಘೋಷಣೆ ಮಾಡಿದ್ರು. ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇರಿದಂತೆ ಹಲವು ಪರೀಕ್ಷೆಗಳು ಇರುತ್ತವೆ ಎಂದು. ಆದ್ರೆ, ಯಾವುದೋ ಒಂದೆರಡು ಹುದ್ದೆಗಳಿಗೆ ಮಾತ್ರ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ, ಉಳಿದ ಎಲ್ಲಾ ಪರೀಕ್ಷೆಗಳನ್ನ ಹಿಂದಿ ಅಥವಾ ಇಂಗ್ಲೀಷ್ ನಲ್ಲೇ ಬರೆಯಬೇಕಂತೆ. ಅದೂ ಕೂಡ, ಕನ್ನಡಿಗರ ಪ್ರತಿಭಟನೆ, ವಿರೋಧ ವ್ಯಕ್ತವಾದ ಮೇಲೆ ಒಂದೆರಡು ಪರೀಕ್ಷೆಗಳನ್ನ ಕನ್ನಡದಲ್ಲಿ ಬರೆಯೋಕೆ ಅವಕಾಶ ನೀಡಿದ್ದಾರೆ.
![](https://risingkannada.com/wp-content/uploads/2019/09/flag2.jpg)
ಕನ್ನಡ ಪರ ಸಂಘಟನೆಗಳು ಪ್ರತಿಭಟನೆ, ಅಭಿಯಾನ ಮಾಡುತ್ತಲೇ ಇವೆ. ಪ್ರತಿಪಕ್ಷ ನಾಯಕರಾದ ಕುಮಾರಸ್ವಾಮಿ, ಸಿದ್ದರಾಮಯ್ಯ ಟ್ವೀಟ್ ಕೂಡ ಮಾಡಿದ್ದಾರೆ. ಆದ್ರೆ, ಪಾಪ ನಮ್ಮ ರಾಷ್ಟ್ರೀಯ ಪಕ್ಷ ಬಿಜೆಪಿ ನಾಯಕರು, ಸಂಸದರು, ಸಚಿವರು ಯಾರು ಕೂಡ ಕನ್ನಡಿಗರ ಆಗ್ತಿರೋ ಅನ್ಯಾಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ.
ಈ ಹಿಂದೆ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಸೇರಿದಂತೆ ಹಲವು ಸಂಸದರು ಪ್ರಮಾಣಿಕ ಪ್ರಯತ್ನ ಮಾಡಿದ್ರು. ಅದರ ಫಲವಾಗಿಯೇ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡೋದಾಗಿ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ರು. ಆದ್ರೆ, ಅದ್ಯಾವುದು ಈಗ ಈಡೇರಿಲ್ಲ. ನಮ್ಮ ಸಂಸದರ ಮಾತಿಗೆ, ಮನವಿಗೆ ಬೆಲೆಯೇ ಇಲ್ವಾ ಅನ್ನೋ ಅನುಮಾನ ಶುರುವಾಗಿದೆ. ಇದು ಸಂಸದರಿಗೆ ಮಾಡಿದ ಅವಮಾನ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರಿಗೆ ಮಾಡಿದ ಮೋಸ, ಅವಮಾನ ಅಂದ್ರೆ ತಪ್ಪಲ್ಲ.
ನಾವು ಕನ್ನಡಿಗರು ವಿಶಾಲ ಮನೋಭಾವದವರು ಎಲ್ಲವನ್ನೂ ಸಹಿಸಿಕೊಂಡು ಇರಬೇಕು ಅಷ್ಟೇ ಅಲ್ವಾ..?
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
ಕಿರುತರೆ ನಟ ಪ್ರದೀಪ್ ನಿಧನ
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಕೇಜ್ರಿವಾಲ್ ಪರ ಪ್ರತಿಭಟನೆಗೆ ಮುಂದಾದ ವಕೀಲರು : ಎಚ್ಚರಿಕೆ ನೀಡಿದ ಹೈಕೋರ್ಟ್
ಶಿವಣ್ಣ, ರಾಮ್ಚರಣ್ ಸಿನಿಮಾ ಒಪ್ಪಿಕೊಳ್ಳಲು ‘ಜೈಲರ್’ ಕಾರಣ ಅಲ್ಲ,