Featured
ಒಕ್ಕಲಿಗ ಸಮುದಾಯ ಬಿಜೆಪಿಯಿಂದ ದೂರು ಆಗ್ತಿದೆಯಾ..? ಶಾಸಕ ಗೌರಿ ಶಂಕರ್ ಹೇಳಿದ್ದು ನಿಜನಾ..?

ತುಮಕೂರು : ಡಿಕೆ ಶಿವಕುಮಾರ್ ಅವರನ್ನ ಬಂಧಿಸಿರೋದಕ್ಕೆ ಈಗ ಇಡೀ ಒಕ್ಕಲಿಗ ಸಮುದಾಯ ಒಂದಾಗಿದೆ. ಅಲ್ಲದೆ, ಒಕ್ಕಲಿಗ ಸಮುದಾಯ ಬಿಜೆಪಿಯಿಂದ ದೂರ ಆಗ್ತಿದೆ ಎಂದು ಶಾಸಕ ಗೌರಿ ಶಂಕರ್ ಹೇಳಿದ್ದಾರೆ. ತುಮಕೂರಿನಲ್ಲಿ ಮಾತ್ನಾಡಿದ ಶಾಸಕ ಗೌರಿ ಶಂಕರ್, ಬಿಜೆಪಿ ನಾಯಕರು ಜೆಡಿಎಸ್ ಹಾಗೂ ಕಾಂಗ್ರೆಸ್ನ ಒಕ್ಕಲಿಗ ನಾಯರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ರು.
ಬಿಜೆಪಿ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಮೊದಲು, ಫೋನ್ ಟ್ಯಾಪಿಂಗ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರು ತಂದ್ರು. ಸ್ವತಃ ಡಿಕೆಶಿಯವರೇ ಹೇಳಿದ್ರು, ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡ್ತಿದೆ ಎಂದು. ಅದರಂತೆ ಇವತ್ತು ಒಕ್ಕಲಿಗರ ನಾಯಕರನ್ನೇ ಬಿಜೆಪಿ ಟಾರ್ಗೆಟ್ ಮಾಡ್ತಿದೆ ಎಂದು ಗೌರಿ ಶಂಕರ್ ಆರೋಪಿಸಿದ್ರು.
ಮತ್ತೊಂದೆಡೆ ಒಕ್ಕಲಿಗ ಸಮುದಾಯ ಬಿಜೆಪಿಯಿಂದ ದೂರ ಆಗ್ತಿದೆಯಾ ಅನ್ನೋ ಅನುಮಾನ ಹಾಗೂ ಚಿಂತೆ ಬಿಜೆಪಿ ನಾಯಕರಿಗೆ ಶುರುವಾಗಿದೆ ಎಂದು ಶಾಸಕ ಗೌರಿ ಶಂಕರ್ ಹೇಳಿದ್ದಾರೆ. ಇಡೀ ಒಕ್ಕಲಿಗ ಸಮುದಾಯ ಈಗ ಒಂದಾಗಿದ್ದು, ಪ್ರತಿಭಟನೆ ನಡೆಸ್ತಿದೆ. ಮುಂದೆ ಇದು ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಅನ್ನೋದು ಬಿಜೆಪಿ ನಾಯಕರ ಚಿಂತೆ ಎಂದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















