Featured
ಒಕ್ಕಲಿಗರ ಆಕ್ರೋಶಕ್ಕೆ ಬೆಂಗಳೂರು ಸ್ತಬ್ಧ ಆಗುತ್ತಾ..? : ಬೆಂಗಳೂರಿಗರೇ ಎಚ್ಚರ ಎಚ್ಚರ..!

ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ, ಒಕ್ಕಲಿಗರ ಲೀಡರ್ ಡಿ.ಕೆ. ಶಿವಕುಮಾರ್ ಬಂಧನಕ್ಕೆ ಒಕ್ಕಲಿಗ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಡಿಕೆಶಿ ಬಂಧನ ಖಂಡಿಸಿ, ಇಡಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ. ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ಒಕ್ಕಲಿಗರ ಸಂಘ, ಡಿಕೆಶಿ ಅಭಿಮಾನಿಗಳ ಸಂಘ ಸೇರಿದಂತೆ ಒಕ್ಕಲಿಗರ ಸಂಘಟನೆಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಲಿವೆ. ಇದರಿಂದಾಗಿ ನಾಳೆ ಅಂದ್ರೆ ಬುಧವಾರ ಬೆಂಗಳೂರು ಸ್ತಬ್ಧವಾಗೋ ಎಲ್ಲಾ ಸಾಧ್ಯತೆಗಳಿವೆ.
ಬೆಳಗ್ಗೆ 10.30ಕ್ಕೆ ಪ್ರತಿಭಟನೆ ಶುರುವಾಗಲಿದೆ. ನ್ಯಾಷನಲ್ ಕಾಲೇಜು ಮೈದಾನದಿಂದ ಆರಂಭವಾಗಿ, ಜೈನ್ ಕಾಲೇಜ್, ಮಿನರ್ವಾ ಸರ್ಕಲ್, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್ ಬಿಟ್ಟು ಫ್ರೀಡಂಪಾರ್ಕ್ಗೆ ಱಲಿ ಬರಲಿದೆ. ಸುಮಾರು 6 ಕಿಲೋ ಮೀಟರ್ ದೂರ ಱಲಿ ಇರಲಿದ್ದು, ಈ ಭಾಗಗಳಲ್ಲಿ ಸಂಚರಿಸೋ ಪ್ರಾಯಾಣಿಕರು ಎಚ್ಚರ ವಹಿಸಬೇಕು.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರಗೆ ಱಲಿ ನಡೆಯಲಿದ್ದು, ಫ್ರೀಡಂಪಾರ್ಕ್ರ್ಯಾಲಿನಲ್ಲಿ ಸಮಾವೇಶ ನಡೆಯಲಿದೆ. ಕೆಲವು ಸಂಘಟನೆಗಳು ರಾಜಭವನ್ ಮುತ್ತಿಗೆ ಹಾಕೋ ಪ್ರಯತ್ನವನ್ನೂ ನಡೆಸುವ ಸಾಧ್ಯತೆ ಇದೆ. ನಾರಾಯಣಗೌಡ ಸೇರಿದಂತೆ ವಿವಿಧ ಸಂಘಟನೆಗಳ 10ಕ್ಕೂ ಹೆಚ್ಚು ಒಕ್ಕಲಿಗ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ನಿರ್ಮಲಾನಂದ ಶ್ರೀಗಳು ಭಾಗಿ..?
ಒಕ್ಕಲಿಗ ಸಂಘಟನೆಗಳು ನಡೆಸ್ತಿರೋ ಱಲಿಗೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದು, ಹಲವು ಕಾಂಗ್ರೆಸ್ ಮುಖಂಡರು ಈ ಱಲಿಯಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ, ಆದಿ ಚುಂಚನಗಿರಿಯ ಶ್ರೀ, ನಿರ್ಮಲಾನಂದ ಸ್ವಾಮೀಜಿ ಕೂಡ ಡಿಕೆಶಿ ಬಂಧನದ ವಿರುದ್ಧ ನಡೀತಿರೋ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ, ಇದು ಇನ್ನೂ ಅಧಿಕೃತವಾಗಿಲ್ಲ.
ಒಟ್ಟಿನಲ್ಲಿ ಡಿಕೆಶಿ ಬಂಧನ ಖಂಡಿಸಿ, ಇಡೀ ರಾಜ್ಯದಲ್ಲಿರೋ ಒಕ್ಕಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಶಕ್ತಿ ಪ್ರದರ್ಶನದ ಜೊತೆ ರ್ಯಾಲಿ ನಡೆಸಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?