Featured
ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ-ಸುಮಲತಾ : ಪರಸ್ಪರ ಶುಭಾಶಯ ವಿನಿಮಯ
ಮಂಡ್ಯ : ಲೋಕಸಭಾ ಚುನಾವಣೆ ಗೆದ್ದು ಸಂಸದೆ ಆದ ಬಳಿಕ ಇದೇ ಮೊದಲ ಬಾರಿಗೆ ಸಂಸದೆ ಸುಮಲತಾ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ್ರು. ಮಂಡ್ಯದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಸಿದ್ದರಾಮಯ್ಯ ಹಾಗೂ ಸುಮಲತಾ ಆಗಮಿಸಿದ್ರು. ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಶುಭಾಶಯ ವಿನಿಮಯ ಮಾಡಿಕೊಂಡ್ರು.
ಸಂಸದೆಯಾಗಿ ಗೆದ್ದ ಮೇಲೆ ನಿಮಗೆ ಶುಭಾಶಯ ಹೇಳಲು ಆಗಲಿಲ್ಲ ಎಂದು ಸುಮಲತಾಗೆ ಶುಭ ಕೋರಿದ್ರು. ಈ ವೇಳೆ ಸಿದ್ದರಾಮಯ್ಯಗೆ ಸುಮಲತಾ ಧನ್ಯವಾದ ಹೇಳಿದ್ರು. ಮಂಡ್ಯದ ನೂರಡಿ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಶುಭಾಶಯ ಹೇಳಿದ್ರು. ಇದೇ ವೇಳೆ, ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದ ಮಳಿಗೆ ಉದ್ಘಾಟನೆ ಕಾರ್ಯಕ್ರಮ ನಡೀತು. ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಮೊದಲೇ ಆಗಮಿಸಿದ್ದರು, ಬಳಿಕ ಸಿದ್ದರಾಮಯ್ಯಗಾಗಿ ಕಾದು ಮಳಿಗೆ ಉದ್ಘಾಟನೆ ಮಾಡಿದ್ರು.
ಈ ವೇಳೆ ಮಾತ್ನಾಡಿದ ಸಿದ್ದರಾಮಯ್ಯ, ಮಳಿಗೆ ಉದ್ಘಾಟನೆಗೂ ಮೊದಲೇ ಸುಮಲತಾಗೆ ಶುಭಾಶಯ ಹೇಳಿದ್ರು. ಸುಮಲತಾ ಗೆದ್ದ ಬಳಿಕ, ನಿಮಗೆ ಶುಭಾಶಯ ಹೇಳಲು ಆಗಲಿಲ್ಲ ಎಂದು ಸುಮಲತಾಗೆ ಶುಭಾಶಯ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಿದ್ರು ಸುಮಲತಾ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?