ಸಿನಿಮಾ
ಒಂದು ಸಿನಿಮಾಗೆ 54 ಕೋಟಿ ರೂ. ಸಂಭಾವನೆ ಪಡೆಯುತ್ತಾರಾ ಅಕ್ಷಯ್ ಕುಮಾರ್..?
ಮುಂಬೈ : ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಿರೋ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಸಂಭಾವನೆಯನ್ನ ದುಪ್ಪಟ್ಟು ಮಾಡಿದ್ದಾರಂತೆ. 2012ರಲ್ಲಿ ತೆರೆಕಂಡಿದ್ದ ರೌಡಿ ರಾಥೋಡ್ ಸಿನಿಮಾಗೆ ಅಕ್ಷಯ್ ತೆಗೆದುಕೊಂಡಿದ್ದ ಸಂಭಾವನೆ 27 ಕೋಟಿ ರೂಪಾಯಿ. ಆದ್ರೀಗ ಅಕ್ಷಯ್ ಕುಮಾರ್ ಒಂದು ಸಿನಿಮಾಗೆ 54 ಕೋಟಿ ರೂಪಾಯಿ ಚಾರ್ಜ್ ಮಾಡ್ತಿದ್ದಾರಂತೆ.
ಸಾಕಷ್ಟು ಹಿಟ್ ಸಿನಿಮಾಗಳ ಜೊತೆ ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅಕ್ಷಯ್, ಒಂದು ಸಿನಿಮಾಗೆ 54 ಕೋಟಿ ರೂಪಾಯಿ ತೆಗೆದುಕೊಳ್ತಿದ್ದಾರೆ. ಮುಂದಿನ ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ಬ್ಯಾನರ್ನಲ್ಲಿ ಮಾಡಲಿದ್ದಾರೆ. ಈ ಹಿಂದೆ ರೌಡಿ ರಾಥೋಡ್ ಸಿನಿಮಾಗೆ 27 ಕೋಟಿ ತೆಗೆದುಕೊಂಡಿದ್ದ ಅಕ್ಷಯ್, ತನ್ನ ಸಂಭಾವನೆಯನ್ನ 54 ಕೋಟಿ ಮಾಡಿರೋದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆಯಂತೆ.
ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಂಗಲ್ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆ ಹೌಸ್ಫುಲ್ 4, ರಾಜ್ ಮೆಹ್ತಾ ಅವರ ಗುಡ್ ನ್ಯೂಸ್, ರಾಘವ್ ನಿರ್ದೇಶನದ ಲಕ್ಷ್ಮೀ ಬಾಂಬ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಸಿನಿಮಾಗಳು ಕಂಪ್ಲೀಟ್ ಆದ್ಮೇಲೆ, ಸಂಜಯ್ ಲೀಲಾ ಬನ್ಸಾಲಿ ಬ್ಯಾನರ್ನಲ್ಲಿ ಅಕ್ಷಯ್ ನಟಿಸಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?