Featured
ಐತಿಹಾಸಿಕ ಸಾಧನೆ ಮಾಡಿದ PV ಸಿಂಧು : ವಿಶ್ವ ಬ್ಯಾಡ್ಮಿಂಟನ್ ಗೆದ್ದ ಮೊದಲ ಭಾರತೀಯ ತಾರೆ

ಬಾಸೆಲ್ : ಭಾರತದ ನಂಬರ್ ಒನ್ ಬ್ಯಾಡ್ಮಿಂಟನ್
ತಾರೆ ಪಿ.ವಿ. ಸಿಂಧು, ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬಾಸೆಲ್ನಲ್ಲಿ ನಡೆದ ವಿಶ್ವ
ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ಗೆಲ್ಲುವ ಮೂಲಕ, ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಪಿ.ವಿ.
ಸಿಂಧು.
ಇದುವರೆಗೆ ಯಾವ ಭಾರತೀಯ ಆಟಗಾರ್ತಿ ಮಾಡದ ಸಾಧನೆ ಮಾಡುವ ಮೂಲಕ, ವಿಶ್ವ
ಬ್ಯಾಡ್ಮಿಂಟನ್ನಲ್ಲಿ ರಾಣಿಯಾಗಿ ಹೊರಹೊಮ್ಮಿದ್ದಾರೆ. ಇವತ್ತು ಫೈನಲ್ ಪಂದ್ಯದಲ್ಲಿ ಜಪಾನ್ನ ನೋಜೊಮಿ
ಓಕುಹರಾ ವಿರುದ್ಧ 21-7, 21-7 ಭಾರೀ ಅಂತರದಿಂದ ಮಣಿಸುವ ಮೂಲಕ, ಸಿಂಧು ಹೊಸ ಇತಿಹಾರ ಸೃಷ್ಟಿಸಿದರು.
ವಿಶೇಷ ಅಂದ್ರೆ, 2017ರಲ್ಲಿ ಇದೇ ಓಕುಹರಾ, ಸಿಂಧು ವಿರುದ್ಧ ಫೈನಲ್ನಲ್ಲಿ
ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ರು. ಇದೀಗ ಓಕುಹರಾ ವಿರುದ್ಧ ಗೆಲ್ಲುವ ಮೂಲಕ ಸಿಂಧು, ಸೇಡು
ತೀರಿಸಿಕೊಂಡಿದ್ದಾರೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. The stupendously talented @Pvsindhu1 makes India proud again!
Congratulations to her for winning the Gold at the BWF World Championships. The passion and dedication with which she’s pursued badminton is inspiring.
PV Sindhu’s success will inspire generations of players.— Narendra Modi (@narendramodi) August 25, 2019
ಸಿಂಧು ಸಾಧನೆಗೆ ಪ್ರಧಾನಿ ಮೋದಿ ಶಹಬ್ಬಾಸ್ಗಿರಿ..!
ಪಿ.ವಿ. ಸಿಂಧು ಮಾಡಿರೋ ಐತಿಹಾಸಿಕ ಸಾಧನೆಯನ್ನ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ಪಿ.ವಿ. ಸಿಂಧು, ಭಾರತದ ಹೆಮ್ಮೆ. ಪಿ.ವಿ. ಸಿಂಧು ಸಾಧನೆಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಸಿಂಧು ಅವರ ಸಾಧನೆ ಇತರೆ ಆಟಗಾರರಿಗೆ, ಎಲ್ಲ ವರ್ಗ ಹಾಗೂ ಜನರೇಷನ್ಗೆ ಸ್ಫೂರ್ತಿ ಆಗಲಿ ಎಂದು ಕೊಂಡಾಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?