Featured
ಏ ಬ್ಲಾಕ್ ಕೋಬ್ರಾ, ಕರಿಗೊಬ್ರ ಕುತ್ಕಳ್ಳಯ್ಯಾ..! ಎಷ್ಟು ಹೆಂಡ್ರನ್ನಯ್ಯಾ ಮದ್ವೆ ಆಗ್ತಿಯಾ..? ಬೆಳಗೆರೆ ಮಾತಿಗೆ ದುನಿಯಾ ವಿಜಿ ಹೀಗೆ ಹೇಳೋದಾ..?
ಬೆಂಗಳೂರು: ಖ್ಯಾತ ಪತ್ರಕರ್ತ ಹಾಗೂ ಲೇಖಕ ರವಿ ಬೆಳಗೆರೆ ಇತ್ತೀಚೆಗೆ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಅನಿಸಿಕೆ, ಅಭಿಪ್ರಾಯ, ರೋಚಕ ಘಟನೆಗಳು, ಪತ್ರಿಕೋದ್ಯಮ, ರಾಜಕಾರಣ, ಸಿನಿಮಾ, ಭೂಗತ ಜಗತ್ತಿನ ಬಗ್ಗೆ ವಿಡಿಯೋ ಮಾಡಿಸಿ ತಮ್ಮ ಯೂಟ್ಯೂಬ್ ಚಾನೆಲ್ ಲ್ಲಿ ಅಪ್ಲೋಡ್ ಮಾಡ್ತಿರ್ತಾರೆ. ಹಿಂದೆ ಈ ಟಿವಿಯಲ್ಲಿ ಬರ್ತಿದ್ದ ಕ್ರೈಂ ಡೈರಿ ತರಹ ಅವರ ಮಾತಿನ ಚಾಟಿ ಇಲ್ಲಿ ಕಾಣಸಿಗುತ್ತೆ.
ಕಳೆದೊಂದು ತಿಂಗಳಿನಿಂದ ರಾಜಕಾರಣದ ವಿರುದ್ಧ ಗುಟುರು ಹಾಕ್ತಿದ್ದ ರವಿ, ಎರಡು ದಿನಗಳ ಹಿಂದೆ ನಟ ದರ್ಶನ್ ಹಾಗೂ ಆತನ ಪತ್ನಿ ವಿಜಯಲಕ್ಷ್ಮಿ ಕುರಿತು ವ್ಲೋಗ್ ಮಾಡಿ ಬಿಟ್ಟಿದ್ದಾರೆ. ದರ್ಶನ್ ಪದೇ ಪದೇ ತನ್ನ ಪತ್ನಿ ಮೇಲೆ ದಬ್ಬಾಳಿಕೆ ಮಾಡುತ್ತಿರುವುದರ ಬಗ್ಗೆ ತರಾಟೆಗೆ ತೆಗೆದುಕೊಂಡು ನಟ ದುನಿಯಾ ವಿಜಿ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಬಹುಪತ್ನಿತ್ವದ ಬಗ್ಗೆ ಅವರದ್ದೇ ಶೈಲಿಯಲ್ಲಿ ಮಾತನಾಡಿದ್ದರು.
ಈ ವಿಡಿಯೋ ಟಿವಿ ಚಾನೆಲ್ ಗಳಲ್ಲೂ ಪ್ರಸಾರವಾಗುತ್ತಿದ್ದಂತೆ ನಟ ವಿಜಯ್ ಅಸಭ್ಯ ಪದ ಪ್ರಯೋಗ ಮಾಡಿದ್ದಾರೆ. ಮೊದಲು ತನ್ನ ಕುಟುಂಬ ನೆಟ್ಟಗಿದ್ಯಾ ನೋಡಿಕೊಳ್ಳಲಿ ಆಮೇಲೆ ನನ್ನ ಬಗ್ಗೆ ಅಥವಾ ದರ್ಶನ್ ಬಗ್ಗೆ ಮಾತನಾಡಲಿ, ವರ್ಷದ ಆರು ತಿಂಗಳು ಆಸ್ಪತ್ರೆಯಲ್ಲಿ ಬಿದ್ದಿರ್ತಾರೆ ಅಂತ ಕೋಪಗೊಂಡಿದ್ದಾರೆ.
ರವಿ ಬೆಳಗೆರೆ ಹೇಳಿದ್ದಿಷ್ಟು:
‘ ಈ ಯಮ್ಮನ್ನ ಬಿಡ್ತಾನಂತೆ, ಆ ಯಮ್ಮನ್ನ ಕಡ್ಕೋತ್ತಾನಂತೆ, ಈ ಹುಡುಗರಿಗೆ ಏನಾಗಿದೆ, ಮಾರ್ಕೆಟ್ ಇದೆ, ಹೆಸರು ಇದೆ’
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಅಶ್ವಿನಿ ಪುನೀತ್ ಕುರಿತ ಪೋಸ್ಟ್ ನೋಡಿ ಬೇಸರಗೊಂಡ ದರ್ಶನ್
Kaatera Aradhana | ಕಾಟೇರಾ ಬೆಡಗಿ ಆರಾಧನಾ ರಾಮ್ ಹಾಟ್ ಫೋಟೋಶೂಟ್
ಶ್ರೀರಂಗ ಪಟ್ಟಣದಲ್ಲಿ ದರ್ಶನ್ ವಿವಾದಾತ್ಮಕ ಹೇಳಿಕೆ ಆರೋಪ