Featured
ಎರಡು ವರ್ಷಗಳ ಪರಿಶ್ರಮ ಪೈಲ್ವಾನ್, ಅಭಿಮಾನಿಗಳು ಬಾದ್‌ಶಾ ಅಂತ ಕರೆದ್ರೂ ಖುಷಿನೇ : ಸುದೀಪ್
![](https://risingkannada.com/wp-content/uploads/2019/09/download-1-1.jpg)
ರೈಸಿಂಗ್ ಕನ್ನಡ ಸಿನಿಮಾ: ಬಹುನಿರೀಕ್ಷೆಯ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಪೈಲ್ವಾನ್ ಬಿಡುಗಡೆಯಾಗಿ ಸಖತ್ ಓಪನಿಂಗ್ ಪಡೆದಿದೆ, ಈ ಕುರಿತು ಭಾವುಕರಾಗಿ ಉತ್ತರಿಸಿದ ಕಿಚ್ಚ ಸುದೀಪ್ ತಮ್ಮ ಮಗಳೂ ಸಿನಿಮಾ ನೋಡಿ ಕಣ್ಣೀರಿಟ್ಟಳು ಎಂದು ಮನದಾಳ ಬಿಚ್ಚಿಟ್ಟಿದ್ದಾರೆ.
ಪೈಲ್ವಾನ್ ಸಿನಿಮಾ ಕನ್ನಡದಲ್ಲಿ ಹೊಸತನದ ಕಥೆ ಹೊಂದಿರುವ ಚಿತ್ರ ರಾಜ್ಯಾದ್ಯಂತ ಇಂದು ರಿಲೀಸ್ ಆಗಿದ್ದು, ಅಭಿಮಾನಿಗಳು ಮುಂಜಾನೆಯಿಂದಲೇ ಹಬ್ಬದ ವಾತಾವರಣವನ್ನ ಸೃಷ್ಟಿಸಿದ್ದಾರೆ. ಸುದೀಪ್ ಪಾಲಿಗೂ ಈ ಚಿತ್ರ ಮಹತ್ವದದ್ದಾಗಿದ್ದು ಬರೊಬ್ಬರಿ ಎರಡು ವರ್ಷ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ.
ಸಿನಿಮಾ ಮೊದಲ ದಿನಕ್ಕೆ ಸಿಕ್ಕ ಬೆಂಬಲವನ್ನ ನೋಡಿ ಭಾವುಕರಾದ ಸುದೀಪ್ ಮಾಧ್ಯಮಗಳ ಜತೆ ಮಾತನಾಡಿ, ನನ್ನ ಪತ್ನಿ ಹಾಗೂ ಮಗಳು ಸಿನಿಮಾ ನೋಡಿ ಕಣ್ಣೀರಿಟ್ಟಿದ್ದಾರೆ ಎಂದರೆ ನನ್ನ ಅಭಿನಯ ಅಷ್ಟರಮಟ್ಟಿಗೆ ಇದೆ ಎಂದೇ ಆರ್ಥ, ಯಾರ ಅಪ್ಪ ಕೂಡ ಬೇರೆಯವರಿಂದ ಹೊಡೆಸಿಕೊಳ್ಳುವುದನ್ನ ನೋಡಲು ಮಕ್ಕಳು ಇಷ್ಟಪಡುವುದಿಲ್ಲ, ಸಾಕಷ್ಟು ಮಂದಿ ಸಿಕ್ಸ್ ಪ್ಯಾಕ್ ಸಿಜಿ ಎಂದು ವ್ಯಂಗ್ಯ ಮಾಡುತ್ತಿದ್ದಾರೆ ಅಂತವರಿಗೆ ಸಿನಿಮಾನೇ ಉತ್ತರ ನೀಡಲಿದೆ ಎಂದರು. ಇನ್ನು ಅಭಿಮಾನಿಗಳು ಬಾದ್‌ಶಾ ಅಂತ ಕರೆಯೋದಕ್ಕೆ ಶುರುಮಾಡಿದ್ದಾರೆ ಎಂಬುದಕ್ಕೆ ಉತ್ತರ ನೀಡಿ, ಅಭಿಮಾನಿಗಳು ಏನು ಕರೆದರೂ ಖುಷಿನೇ ಎಂದು ಹೇಳಿದರು.