Featured
ಎದೆ ಬಗೆದರೂ ಸಿದ್ದರಾಮಯ್ಯ ಇದ್ರು.. ಈಗಿಲ್ಲ..! ನಮ್ಮ ಎದೆಯಲ್ಲಿ ಇರೋದು ಮತದಾರರು : MTB ನಾಗರಾಜ್
ಬೆಂಗಳೂರು : ಅನರ್ಹ ಶಾಸಕರ ಸ್ಥಿತಿ ಏನು ಅನ್ನೋದು ಸದ್ಯಕ್ಕೆ ಯಾರಿಗೂ ಗೊತ್ತಿಲ್ಲ. ಹೀಗಾಗಿಯೇ ಮುಂದೇನು ಮಾಡ್ಬೇಕು ಅಂತ ಚರ್ಚಿಸೋಕೆ ಇವತ್ತು ಡಾ.ಸುಧಾಕರ್ ಮನೆಗೆ ಅನರ್ಹ ಶಾಸಕರೆಲ್ಲಾ ಬಂದು ಸೇರಿದ್ರು. ಸಭೆ ಬಳಿಕ ಮಾತ್ನಾಡಿದ ಅನರ್ಹ ಶಾಸಕ, ಹೊಸಕೋಟೆಯ ಎಂಟಿಬಿ ನಾಗರಾಜ್, ಮೊದಲು ನಮ್ಮ ಎದೆಯಲ್ಲಿ ಸಿದ್ದರಾಮಯ್ಯನವರೇ ತುಂಬಿಕೊಂಡಿದ್ರು. ಈಗ ಅವರಿಲ್ಲ. ನಮ್ಮ ಎದೆಯಲ್ಲಿ ನಮ್ಮ ಕ್ಷೇತ್ರದ ಮತದಾರರು ಮಾತ್ರ ಇದ್ದಾರೆ. ಯಡಿಯೂರಪ್ಪನೂ ಇಲ್ಲ, ಬೇರೆ ಯಾರೂ ಇಲ್ಲ ಎಂದ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಡಾ.ಸುಧಾಕರ್ ನಿವಾಸದಲ್ಲಿನ ಸಭೆ ಬಳಿಕ ಮಾತ್ನಾಡಿದ ಎಂಟಿಬಿ ನಾಗರಾಜ್, ಇವತ್ತಿನ ಸಭೆಯಲ್ಲಿ ಏನೂ ಚರ್ಚೆ ಮಾಡಿಲ್ಲ. ಸುಧಾಕರ್ ಮನೆಗೆ ಬಂದು, ಟಿಫನ್ ಮಾಡಿದ್ವಿ ಅಷ್ಟೇ ಅಂದ್ರು. ಇದೇ ವೇಳೆ, ಬಿಜೆಪಿ ನಾಯಕರ ಮೇಲೆ ನಮಗೆ ಕೋಪವಿಲ್ಲ. ನಮ್ಮ ಕೇಸ್, ನ್ಯಾಯಾಲಯದಲ್ಲಿದೆ ಎಂದರು.
ಜೊತೆಗೆ ಬಿಜೆಪಿ ನಾಯಕರ ವಿರುದ್ಧ ಸದ್ಯಕ್ಕೆ ಅಸಮಾಧಾನವಿಲ್ಲ. ಮುಂದೆ ಸಂದರ್ಭ ಬಂದಾಗ ನೋಡೋಣ ಎಂದು, ಬಿಜೆಪಿ ನಾಯಕರಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ರು ಎಂಟಿಬಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?