Featured
ಇದನ್ನ ನೋಡಿ ಕಣ್ಮುಚ್ಚದೇ ಏನ್ ಮಾಡ್ತಾರೆ ಟ್ರಂಪ್..! ಯಾರು..? ಎಲ್ಲಿ..?
![](https://risingkannada.com/wp-content/uploads/2019/08/opui6i9g_melania-trump-justin-trudeau_625x300_27_August_19.jpg)
ಫ್ರಾನ್ಸ್: ಒಂದು ಫೋಟೋ ಸಾವಿರ ಪದಗಳಿಗೆ ಸಮ ಅನ್ನೋ ಮಾತಿದೆ. ನೀವೀಗ ನೋಡ್ತಿರೋ ಫೋಟೋಗೆ ಸಾವಿರ ಪದಗಳಲ್ಲ.. ಲಕ್ಷಾಂತರ ಪದಗಳು ಕೂಡ ಸಾಕಾಗಲ್ಲ. ಅದರಂತೆ, ಇಡೀ ಜಗತ್ತಿನಲ್ಲಿ ಈ ಫೋಟೋಗೆ ವಿವಿಧ ರೀತಿಯ ಕಾಮೆಂಟ್ಗಳು, ಪ್ರತಿಕ್ರಿಯೆಗಳು ಬರುತ್ತಿವೆ. ಈ ಫೋಟೋದಿಂದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ನಿದ್ದೆ ಕೂಡ ಬಂದಿಲ್ಲ. ಎಷ್ಟರ ಮಟ್ಟಿಗೆ ಅಂದ್ರೆ, ಈ ಫೋಟೋ ಡಿಲೀಟ್ ಮಾಡಲು ಟ್ವಿಟ್ಟರ್ ಕೂಡ ನಿರಾಕರಿಸಿದೆಯಂತೆ.
![](https://risingkannada.com/wp-content/uploads/2019/08/EC2ouwMWwAEO02A-1024x683.jpg)
ಇಷ್ಟಕ್ಕೂ ಈ ಫೋಟೋದಲ್ಲಿ ಇರುವವರ ಬಗ್ಗೆ ಪರಿಚಯ ಮಾಡಿಕೊಡ್ತೀವಿ ನೋಡಿ. ರೊಮ್ಯಾಂಟಿಕ್ ಆಗಿ ಮುತ್ತು ನೀಡಲು ಹೋಗ್ತಿರೋ ಲೇಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ, ಮೆಲಾನಿಯಾ ಟ್ರಂಪ್. ಮೆಲಾನಿಯಾ ಟ್ರಂಪ್ ಕಿಸ್ ಕೊಡಲು ಹೋಗ್ತಿರೋ ವ್ಯಕ್ತಿ ಕೆನಡಾ ಅಧ್ಯಕ್ಷ ಜಸ್ಟಿನ್. ಅಯ್ಯೋ, ಇದೇನ್ ಗತಿನಪ್ಪಾ ಅಂತ ಕಣ್ಣು ಮುಚ್ಚಿಕೊಂಡಿರೋವ್ರು ಡೊನಾಲ್ಡ್ ಟ್ರಂಪ್.
ಈ ಫೋಟೋ ಕ್ಲಿಕ್ ಮಾಡಿದ್ದು ಇತ್ತೀಚೆಗೆ ನಡೆದ G7 ಶೃಂಗಸಭೆಯಲ್ಲಿ.ಈ ಒಂದು ಫೋಟೋ ಹಲವು ಊಹೆಗಳಿಗೆ ಕಾರಣವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಊಹೆ ಮಾಡಿಕೊಂಡು ಕಾಮೆಂಟ್ ಮಾಡ್ತಿದ್ದಾರೆ. ಕೆಲವರು ತಮ್ಮದೇ ಆದ ಪ್ರತಿಕ್ರಿಯೆ ನೀಡ್ತಿದ್ದಾರೆ. ಕೆಲವಂತೂ ಊಹೆಗೂ ನಿಲುಕದ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ .