Featured
ಇಂದು ಸಿದ್ದು-ಸೋನಿಯಾ ಭೇಟಿ : ಪ್ರತಿಪಕ್ಷ ನಾಯಕ ಸ್ಥಾನ ಪಡೀತಾರಾ ಸಿದ್ದರಾಮಯ್ಯ..?
ನವದೆಹಲಿ : ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತುತ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಜೊತೆ ಮಾತುಕತೆ ನಡೆಸಿದ್ದ ಸಿದ್ದು, ಇವತ್ತು ಕಾಂಗ್ರೆಸ್ ಸುಪ್ರೀಂ ಸೋನಿಯಾ ಗಾಂಧಿಯನ್ನ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಪ್ರಮುಖವಾಗಿ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕರು ಯಾರು ಆಗಬೇಕು ಅನ್ನೋದ್ರ ಚರ್ಚೆ ನಡೆಯಲಿದೆ. ಸದ್ಯ ಪ್ರತಿಪಕ್ಷ ನಾಯಕ ರೇಸ್ನಲ್ಲಿ ಸಾಕಷ್ಟು ಮಂದಿಯಿದ್ದು, ಸಿದ್ದರಾಮಯ್ಯನವರೇ ಪ್ರತಿಪಕ್ಷ ನಾಯಕರಾಗಿ ಇರಬೇಕು ಅನ್ನೋದು ಬಹುತೇಖ ಶಾಸಕರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸಿದ್ದು-ಸೋನಿಯಾ ಭೇಟಿ ಮಹತ್ವ ಪಡೆದಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೋ ಬೇಡವೋ ಅನ್ನೋದು ಚರ್ಚೆ ಆಗಲಿದೆ.
ಈ ಮಧ್ಯೆ, ಡಿಕೆ ಶಿವಕುಮಾರ್ ಬಂಧನ ವಿಚಾರವನ್ನೂ ಸಿದ್ದು, ಸೋನಿಯಾ ಮೇಡಮ್ ಜೊತೆ ಚರ್ಚೆ ನಡೆಸಲಿದ್ದಾರೆ. ಮುಂದಿನ ನಿರ್ಧಾರಗಳೇನು..? ಕಾಂಗ್ರೆಸ್ ಏನು ಮಾಡಬೇಕು.? ರಾಜ್ಯದಲ್ಲಿ ಪಕ್ಷ ಸಂಘಟನೆ ಹೇಗೆ ಎಂಬಿತ್ಯಾದ ವಿಷಯಗಳ ಕುರಿತು ನಾಳೆ ಸೋನಿಯಾ ಗಾಂಧಿ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ, ಉಭಯ ನಾಯಕರ ಭೇಟಿ ಕುತೂಹಲ ಮೂಡಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?