Featured
ಇಂದು & ನಾಳೆ ಕಲರ್ಸ್ ಸೂಪರ್ನಲ್ಲಿ ಕನ್ನಡ ಕೋಗಿಲೆ ಫೈನಲ್

ಬೆಂಗಳೂರು : ಕೋಟ್ಯಂತರ ಕನ್ನಡಿಗರ ಮನಗೆದ್ದಿರೋ ಕಲರ್ಸ್ ಸೂಪರ್ ವಾಹಿನಿಯ ಕನ್ನಡ ಕೋಗಿಲೆ ಫೈನಲ್ ಇವತ್ತು ಹಾಗೂ ನಾಳೆ ಪ್ರಸಾರವಾಗಲಿದೆ. ಕನ್ನಡ ಕೋಗಿಲೆ ರಿಯಾಲಿಟಿ ಶೋ ಆಗಿದ್ದು, ಇವತ್ತು ಮತ್ತು ನಾಳೆ ಅಂತಿಮ ವಿನ್ನರ್ಗಳನ್ನ ಘೋಷಣೆ ಮಾಡಲಿದ್ದಾರೆ. ಇದು ಸೀಸನ್ 2 ಆಗಿದ್ದು, ಮೊದಲ ಸೀಸನ್ನಂತೆಯೇ ಇದು ಕೂಡ ಸೂಪರ್ ಹಿಟ್ ಆಗಿದೆ.
ಇಂದು ಮತ್ತು ನಾಳೆ ರಾತ್ರಿ 8 ಗಂಟೆಗೆ ಕಲರ್ಸ್ ಸೂಪರ್ನಲ್ಲಿ ಕನ್ನಡ ಕೋಗಿಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ಮೈಸೂರಿನ ಆಲಾಪ್, ಕೊಪ್ಪಳದ 7 ವರ್ಷದ ಅರ್ಜುನ್ ಇಟಗಿ, ಉಡುಪಿಯ ಕಲಾವತಿ ದಯಾನಂದ್, ಹಾವೇರಿಯ ಖಾಸಿಂ, ಬೆಂಗಳೂರಿನ ನೀತು ಸುಬ್ರಹ್ಮಣ್ಯಂ, ಶಿವಮೊಗ್ಗದ ಪಾರ್ಥ ಫೈನಲ್ ರೌಂಡ್ನಲ್ಲಿ ಇದ್ದಾರೆ. ಫೈನಲ್ ಕಿರೀಟಕ್ಕಾಗಿ ಇವರ ಮಧ್ಯೆ ಹಾಡುಗಳ ಪೈಪೋಟಿ ನಡೆಯಲಿದೆ.
ಒಟ್ಟು ಆರು ಸ್ಪರ್ಧಿಗಳು ಫೈನಲ್ನಲ್ಲಿ ಉಳಿದಿದ್ದು, ಇವರಲ್ಲಿ ಯಾರಿಗೆ ಫೈನಲ್ ಕಿರೀಟ ಹೋಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಸಾಧು ಕೋಕಿಲ, ಅರ್ಚನಾ ಉಡುಪ ಮತ್ತು ಚಂದನ್ ಶೆಟ್ಟಿ, ಈ ರಿಯಾಲಿಟಿ ಶೋನ ತೀರ್ಪುಗಾರರು. ಭಾನುವಾರ ರಾತ್ರಿ ಅಂದ್ರೆ, ನಾಳೆ ರಾತ್ರಿ ವಿನ್ನರ್ ಯಾರು ಅನ್ನೋದು ಗೊತ್ತಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?