Featured
ಆರ್.ಅಶೋಕ್ ಸಾಮ್ರಾಜ್ಯ ಪತನ..! ಬೆಂಗಳೂರು ನಾಯಕತ್ವ ಹೋಯ್ತು.. ಏನ್ಮಾಡೋದು..?
![](https://risingkannada.com/wp-content/uploads/2019/08/ashok-ashwanth-naraya.jpg)
ಬೆಂಗಳೂರು : ಆರ್.ಅಶೋಕ್ ಅವರನ್ನ ಸಾಮ್ರಾಟ್ ಅಶೋಕ್ ಅಂತಲೇ ಬೆಂಗಳೂರಿನ ನಾಯಕರು, ಕಾರ್ಯಕರ್ತರು ಕರೀತಾರೆ. ಇನ್ಮುಂದೆ, ಬಹುಶಃ ಆ ರೀತಿ ಸಾಮ್ರಾಟ್ ಅಶೋಕ್ ಅಂತ ಕರೆಯೋಕೆ ಆಗಲ್ವೇನೋ ಅನ್ಸುತ್ತೆ. ಯಾಕಂದ್ರೆ, ಇನ್ಮುಂದೆ ಡಾ.ಅಶ್ವತ್ಥ ನಾರಾಯಣ ಬೆಂಗಳೂರಿನ ಸಾಮ್ರಾಜ್ಯಕ್ಕೆ ಸಾಮ್ರಾಟರಾಗೋದ್ರಲ್ಲಿ ಅನುಮಾನವೇ ಇಲ್ಲ.
ಯೆಸ್, ಬಿಜೆಪಿಯ ಒಕ್ಕಲಿಗರಲ್ಲಿ ಪ್ರಭಾವಿ ನಾಯಕ ಅಂದ್ರೆ, ಅದು ಆರ್. ಅಶೋಕ್. ಆದ್ರೆ, ಇನ್ಮುಂದೆ ಆ ಟ್ರೇಡ್ ಮಾರ್ಕ್ ಇರೋದಿಲ್ಲ. ಜೊತೆಗೆ ಬೆಂಗಳೂರಿನಲ್ಲಿ ಬಿಜೆಪಿಯ ಯಾವುದೇ ಕೆಲಸ ಆಗ್ಬೇಕಂದ್ರು, ಅದು ಅಶೋಕ್ಗೆ ಗೊತ್ತಿಲ್ಲದೇ ಆಗುತ್ತಿರಲಿಲ್ಲ. ಇನ್ಮುಂದೆ, ಅದ್ಯಾವುದಕ್ಕೂ ಅಸ್ಪದವೇ ಇರೋಲ್ಲ. ಯಾಕಂದ್ರೆ, ಮಲ್ಲೇಶ್ವರಂ ಶಾಸಕ, ಸಚಿವ, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಇನ್ಮುಂದೆ ಬೆಂಗಳೂರು ಸಾಮ್ರಾಟ.
ಅಶ್ವತ್ಥ ನಾರಾಯಣ ಯಾವಾಗ ಮಂತ್ರಿಯಾದ್ರೋ, ಆಗಲೇ ಅಶೋಕ್ ಪವರ್ ಕೊಂಚ ಕಟ್ ಆಗಿತ್ತು. ಆದ್ರೀಗ, ಅಶ್ವತ್ಥ ನಾರಾಯಣ ಡಿಸಿಎಂ ಆಗ್ತಿದ್ದಂತೆ, ಅಶೋಕ್ ಪವರ್ ಫುಲ್ ಕಟ್ ಆದಂತೆ ಆಗಿದೆ. ಅಶ್ವತ್ಥ ನಾರಾಯಣ ಕೂಡ ಒಕ್ಕಲಿಗರು ಅನ್ನೋದು ಮತ್ತೊಂದು ಕಾರಣ. ಜೊತೆಗೆ ಬೆಂಗಳೂರಿನ ಶಾಸಕರು, ಕಾರ್ಪೋರೇಟರ್ಗಳು ಇನ್ಮುಂದೆ ಅಶೋಕ್ ಮಾತನ್ನ ಕೇಳೋ ಅಗತ್ಯವೇ ಇರಲ್ಲ. ಕೇಂದ್ರದಲ್ಲಿ ಸಂತೋಷ್ ಸ್ಟ್ರಾಂಗ್ ಆಗಿ ಇರೋದ್ರಿಂದ, ಇಲ್ಲಿ ಅಶ್ವತ್ಥ ನಾರಾಯಣ ಮಾತು ನಡೆಯುತ್ತೆ. ಸೋ, ಬೆಂಗಳೂರಿನ ನಾಯಕರಿಗೆ ಇನ್ಮುಂದೆ, ಅಶ್ವತ್ಥ ನಾರಾಯಣ ಅವರೇ ಬಾಸ್.
ಆಕ್ರೋಶ.. ಸಿಟ್ಟು ಹೊರ ಹಾಕಿದ್ರಾ ಅಶೋಕ್..?
ಸಚಿವ ಸ್ಥಾನ ಸಿಕ್ಕರೂ, ಡಿಸಿಎಂ ಸ್ಥಾನ ಸಿಗಲಿಲ್ಲ. ಇದ್ರಿಂದ ಸಹಜವಾಗಿಯೇ ಆಕ್ರೋಶ, ಅಸಮಾಧಾನ ಹೊರ ಹಾಕಿರೋ ಅಶೋಕ್, ಸರ್ಕಾರಿ ವಾಹನವನ್ನ ವಾಪಸ್ ಕಳಿಸಿದ್ದಾರೆ. ಆದ್ರೆ, ಎಲ್ಲವೂ ಮುಗಿದು ಹೋಗಿದೆ. ಈಗ ಚಿಂತಿಸಿ ಯಾವುದೇ ಲಾಭವಿಲ್ಲ. ಹೈಕಮಾಂಡ್ ನಿರ್ಧಾರ ಮಾಡಿ ಆಗಿದ್ದು, ಇನ್ಮುಂದೆ ಕೆಮ್ಮಂಗಿಲ್ಲ ಅನ್ನೋ ಚರ್ಚೆ ಬಿಜೆಪಿ ನಾಯಕರಲ್ಲಿ ಕೇಳಿ ಬರ್ತಿದೆ. ಪಾಪ, ಅಶೋಕ್ ಸಾಮ್ರಾಜ್ಯ ಕಳೆದುಕೊಂಡ ನೋವು ತುಂಬಾನೇ ಕಾಡಿದಂತಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?