Featured
ಅಮೆರಿಕಾದಿಂದ ಮರಳಿದ ರೇಣುಕಾಚಾರ್ಯ ಪುತ್ರ: ಪುತ್ರನನ್ನ ನೋಡಿ ಭಾವುಕರಾದ ದಾವಣಗೆರೆ ಶಾಸಕ
![](https://risingkannada.com/wp-content/uploads/2020/08/renukacharya-1-1.jpg)
ರೈಸಿಂಗ್ ಕನ್ನಡ:
ಬೆಂಗಳೂರು :
ಅಮೆರಿಕಾದಿಂದ ಬಂದಿಳಿದ ಮಗನನ್ನ ಕಂಡು ಶಾಸಕ ಎಂ ಪಿ ರೇಣುಕಾಚಾರ್ಯ ಭಾವುಕರಾದ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದ ರೇಣುಕಾಚಾರ್ಯರ ಪುತ್ರ ಚಂದನ್ ಕೊರೊನಾ ಹಿನ್ನೆಲೆ ಸ್ವದೇಶಕ್ಕೆ ಮರಳದೇ ಅಲ್ಲೇ ವಾಸವಾಗಿದ್ದರು.
![](https://risingkannada.com/wp-content/uploads/2020/08/renukacharya-1.jpg)
ಅಮೇರಿಕಾದಲ್ಲಿ ಕೊರೊನಾ ರುದ್ರ ನರ್ತನದಿಂದ ಆತಂಕಕ್ಕೆ ಒಳಗಾಗಿದ್ದ ಎಂ ಪಿ ರೇಣುಕಾಚಾರ್ಯ ಕುಟುಂಬ ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.
![](https://risingkannada.com/wp-content/uploads/2020/08/Sanju-Kumar-Tolle-1024x460.jpg)
ಪದೇ ಪದೇ ಮಗನನ್ನು ನೆನಪಿಸಿಕೊಳ್ಳುತ್ತಾ ನೋವು ಪಡುತ್ತಿದ್ದ ರೇಣುಕಾಚಾರ್ಯ ಅವರು ಗುರುವಾರ ಮಗನನ್ನ ಕಂಡು ಅಪ್ಪಿ ಮುದ್ದಾಡಿ ಪ್ರೀತಿ ತೋರಿದರು.ಬೆಂಗಳೂರಿಗೆ ಆಗಮಿಸಿದ ರೇಣುಕಾಚಾರ್ಯ ಪುತ್ರ ಚಂದನ್ ಅಪ್ಪನನ್ನ ನೋಡಿ ಖುಷಿಪಟ್ಟರು.
ಮಗ ಚಂದನ್ ನನ್ನು ಕುಟುಂಬ ಸಮೇತ ಸ್ವಾಗತಿಸಿದರು.ತಂದೆ ತಾಯಿ ಆಶೀರ್ವಾದ, ಕ್ಷೇತ್ರದ ಜನರ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೇ ವಾಪಸ್ಸಾಗಿರುವೆ ಎಂದು ಚಂದನ್ ತಿಳಿಸಿದರು. ಕೆಲಕಾಲ ಚಂದನ್ ಕಂಡು ಕಣ್ಣಾಲೆಗಳನ್ನು ತುಂಬಿಕೊಂಡ ಎಂ.ಪಿ. ರೇಣುಕಾಚಾರ್ಯ ಭಾವುಕರಾದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?