Featured
ಅಮರನಾಥ ಯಾತ್ರೆಗೆ ಉಗ್ರರಿಂದ ಅಡ್ಡಿ : ಪಾಕಿಸ್ತಾನವೇ ಟೆರರಿಸ್ಟ್ಗೆ ನೆರವು

ನವದೆಹಲಿ : ಅಮರನಾಥ ಯಾತ್ರೆ ಮಾರ್ಗದಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದು, ಭಯೋತ್ಪಾದಕರು ದಾಳಿ ನಡೆಸಲು ಪಾಕಿಸ್ತಾನ ಸೇನೆ ನೆರವು ನೀಡುತ್ತಿದೆ ಎಂದು ಭಾರತೀಯ ಸೇನೆ ಗಂಭೀರ ಆರೋಪ ಮಾಡಿದೆ. ಪಾಕಿಸ್ತಾನ ಸೇನೆಯ ಸಹಾಯದಿಂದ ಉಗ್ರರು ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಯತ್ನ ನಡೆಸಿದ್ದಾರೆ. ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರೋದು ಬಹಿರಂಗವಾಗಿದೆ. ಇದಕ್ಕೆ ಸಂಬಂಧಿಸಿದ ಸ್ಫೋಟಕ ಹಾಗೂ ರೈಫಲ್ಗಳನ್ನ ವಶಕ್ಕೆ ಪಡೆದಿರೋದಾಗಿ ಭಾರತೀಯ ಸೇನೆಯ ಲೆಫ್ಟಿನೆಂಟಲ್ ಜನರಲ್ ಕೆ.ಎಸ್.ಜೆ ಧಿಲ್ಲೋನ್ ತಿಳಿಸಿದ್ದಾರೆ.
ಭಾರತೀಯ ಸೇನೆ ಮಾಡಿರೋ ಗಂಭೀರ ಆರೋಪದಿಂದ ಪಾಕಿಸ್ತಾನದ ದ್ವಿಮುಖ ನೀತಿ
ಬಯಲಾಗಿದೆ. ಶುಕ್ರವಾರ ಕಾಶ್ಮೀರ ಪೊಲೀಸರು ಮತ್ತು ಭಾರತೀಯು ಸೇನೆ ಅಧಿಕಾರಿಗಳೂ ಜಂಟಿಯಾಗಿ ಸುದ್ದಿಗೋಷ್ಠಿ
ನಡೆಸಿ, ಈ ಆಘಾತಕಾರಿ ವಿಷಯವನ್ನ ಬಹಿರಂಗ ಮಾಡಿದ್ರು. Chinar Corps Commander Lt General K J S Dhillon in Srinagar: An M-24 American sniper rifle with a telescope was also recovered from a terror cache along Shri Amarnath ji route pic.twitter.com/VLmkmN8iAd— ANI (@ANI) August 2, 2019
ಅಮರನಾಥ ಯಾತ್ರೆಯ ಮಾರ್ಗದ ಪ್ರದೇಶಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಸೇನೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕಗಳು ಸಿಕ್ಕಿವೆ. ಭೂಮಿಯಲ್ಲಿ ಹುದುಗಿಟ್ಟಿದ್ದ ಸ್ಫೋಟಕಗಳು, ಟೆಲಿಸ್ಕೋಪಿಕ್ 24 ಅಮೆರಿಕನ್ ರೈಫಲ್ ಕೂಡ ಸಿಕ್ಕಿದೆ ಎಂದು ಭಾರತೀಯ ಸೇನೆ ಹೇಳಿದೆ. ಇದರಲ್ಲಿ ಪಾಕಿಸ್ತಾನ ಸೇನೆಯ ಕೈವಾಡ ಇರೋದು ಸ್ಪಷ್ಟ ಎಂದು ಜೆ.ಧಿಲ್ಲೋನ್ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?