Featured
ಅಭಿನಂದನ್ ಪಾತ್ರ ಮಾಡ್ತೀನಿ ಅಂದಿದ್ದಕ್ಕೆ ಮುಗಿಬಿದ್ದ ಟ್ವಿಟ್ಟರಿಗರು ಜಾಡಿಸಿದರು

ಮುಂಬೈ:
ಬಾಲಕೋಟ್ ವೈಮಾನಿಕ ದಾಳಿ ಈ ವರ್ಷ ಪ್ರತೀ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿತ್ತು, ಅದರಲ್ಲೂ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನ ಸೆರೆಹಿಡಿದುಕೊಂಡು ಹೋಗಿದ್ದ ಪಾಕಿಸ್ತಾನ ರಾಜತಾಂತ್ರಿಕ ಮಾತುಕತೆ ಮೂಲಕ ಬಿಡುಗಡೆ ಮಾಡಿತ್ತು, ಈ ರೋಚಕ ಸಂದರ್ಭವನ್ನ ಜನರೂ ಕೂಡ ಕೊಂಡಾಡಿದ್ದರು. ಈಗ ಈ ಘಟನಾವಳಿಗಳ ರೋಚಕ ಸನ್ನಿವೇಶಗಳನ್ನ ಸಿನಿಮಾ ಮಾಡಲು ಖ್ಯಾತ ಬಾಲಿವುಡ್ ನಟ ವಿವೇಕ್ ಒಬೆರಾಯ್ ಹೊರಟಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನೆಟ್ಟಿಗರು ವಿಷ್ ಮಾಡುವ ಬದಲು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಬಯೋಪಿಕ್ ಮಾಡಿ ಜನರಿಂದ ಉಗಿಸಿಕೊಂಡಿದ್ದ ವಿವೇಕ್ ಒಬೆರಾಯ್ ಈ ಸಿನಿಮಾವನ್ನೂ ಹಾಳು ಮಾಡುತ್ತಾರೆಂಬುದು ನೋಡುಗರ ಅಭಿಪ್ರಾಯ. Honoured and humbled 🙏 Jai Hind 🇮🇳#BalakotAirStrike #AbhinandanVarthaman#ProudofIAF @IAF_MCC pic.twitter.com/wsXPoqjbfN— Vivek Anand Oberoi (@vivekoberoi) August 23, 2019
ಸಿನಿಮಾ ಮಾಡುವ ಕುರಿತು ವಿವೇಕ್ ಹೀಗೆ ಹೇಳಿದ್ದಾರೆ ʻ ಹೆಮ್ಮೆಯ ಭಾರತೀಯ ಹಾಗೂ ಚಿತ್ರನಟನಾಗಿ ಭಾರತೀಯ ಸೇನೆಯ ಸಾಹಸ ಹಾಗೂ ಅಭಿನಂದನ್ ತರಹದ ಆಫಿಸರ್ ಬಗ್ಗೆ ಸಿನಿಮಾ ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸುತ್ತೇನೆʼ. ಈ ಸಿನಿಮಾ ಜಮ್ಮು ಕಾಶ್ಮೀರ, ದೆಹಲಿ, ಆಗ್ರಾದಲ್ಲಿ ಚಿತ್ರೀಕರಣ ನಡೆಸಲಾಗುತ್ತೆ ಎನ್ನಲಾಗಿದೆ.