Featured
ಅಬ್ಬಾ.. ಈ ಬಾರಿ ಕಾವೇರಿಗಾಗಿ ತಮಿಳುನಾಡಿನ ಕ್ಯಾತೆ ಇಲ್ಲಪ್ಪ..!

ಮಂಡ್ಯ ಸೇಲಂ : ಪ್ರತಿ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡಿನ ಕ್ಯಾತೆ ಇದ್ದೇ ಇರುತ್ತೆ. ಏಪ್ರಿಲ್ ನಿಂದ ಜುಲೈವರೆಗೆ ತಮಿಳುನಾಡಿನ ಕ್ಯಾತೆ ಪ್ರತಿವರ್ಷವೂ ಇರುತ್ತೆ. ಒಂದ್ವೇಳೆ ಮಳೆ ಸರಿಯಾಗಿಆಗಲಿಲ್ಲ ಎಂದ್ರೆ, ಸೆಪ್ಟೆಂಬರ್, ಅಕ್ಟೋಬರ್ನಲ್ಲೂ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆಯುತ್ತಲೇ ಇರುತ್ತೆ. ಆದ್ರೀಗ ತಮಿಳುನಾಡು ಕ್ಯಾತೆ ತೆಗೆಯೋಕೆ ಆಗಲ್ಲ. ಯಾಕಂದ್ರೆ, ಕಾವೇರಿ ಕೊಳ್ಳದಲ್ಲಿ ರಾಜ್ಯದಲ್ಲಿ ಎಲ್ಲಾ ಡ್ಯಾಂಗಳು ತುಂಬಿದ್ದು, ತಮಿಳುನಾಡಿಗೆ ಸಾಕಷ್ಟು ನೀರು ಹರಿಯುತ್ತಲೇ ಇದೆ.
ವಿಶೇಷ ಅಂದ್ರೆ, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರೋ ತಮಿಳುನಾಡಿನಲ್ಲಿರೋ ಬೃಹತ್ ಡ್ಯಾಂ ಆಗಿರೋ ಮೆಟ್ಟೂರು ಜಲಾಶಯ ಕೂಡ ತುಂಬಿದೆ. 93 ಟಿಎಂಸಿ ಸಾಮರ್ಥ್ಯದ ಮೆಟ್ಟೂರು ಡ್ಯಾಂ ತುಂಬಿದ್ದು, ನದಿಗೆ 70 ಸಾವಿರ ಕ್ಯೂಸೆಕ್ನೀರು ಹರಿದು ಬಿಡಲಾಗ್ತಿದೆ. ಇದ್ರಿಂದ ತಮಿಳುನಾಡಿನ ರೈತರು ಖುಷಿಯಾಗಿದ್ದಾರೆ. ಡ್ಯಾಂ ತುಂಬಿರೋದ್ರಿಂದ, ಮತ್ತೊಂದೆ ಬೆಳೆ ಬೆಳೆಯೋದಕ್ಕೂ ಸಮಸ್ಯೆ ಇಲ್ಲ.
ಕಳೆದ ವರ್ಷವೂ ಆರಂಭದಲ್ಲಿ ಕಷ್ಟವಾದ್ರೂ, ಬಳಿಕ ಮೆಟ್ಟೂರು ಜಲಾಶಯ ತುಂಬಿದ್ದರಿಂದ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಆದ್ರೆ, ಮಾರ್ಕ್ ನಂತರ ಪರಿಸ್ಥಿತಿ ಹೇಗಿರುತ್ತೆ ಅನ್ನೋದನ್ನ ಈಗಲೇ ಹೇಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಸದ್ಯಕ್ಕೆ ನಾಲ್ಕು ತಿಂಗಳು, ನೀರಿಗಾಗಿ ತಮಿಳುನಾಡಿನ ಕಿರಿಕ್ ಇಲ್ಲ ಅನ್ನೋದೇ ಸಮಾಧಾನ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















