Featured
ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರು : ನಂಬರ್ 01 ಯಾರು.? ಕಾಲ್ಶೀಟ್ ಎಷ್ಟು ಗೊತ್ತಾ..?
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ನಟಿ ಎಷ್ಟು ಸಂಭಾವನೆ ತೆಗೆದುಕೊಳ್ತಾರೆ..? ಯಾರು ಟಾಪ್ ಒನ್.. ಯಾವ ನಟಿಗೆ ಎಷ್ಟು ಡಿಮ್ಯಾಂಡಿ ಇದೆ ಅನ್ನೋದನ್ನ ನಾವ್ ಇವತ್ತು ಹೇಳ್ತೀವಿ ಕೇಳಿ.. ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಟಾಪ್ ಟೆನ್ ನಟಿಯರ ಸಂಭಾವನೆಯನ್ನ ತಿಳಿಯೋಣ.
ಟಾಪ್ ಟೆನ್ನಲ್ಲಿ ನಟಿ ನಿತ್ಯಾ ಮೆನನ್ ಇದ್ದಾರೆ. ತೆಲುಗು, ತಮಿಳು, ಮಲಯಾಳಂನಲ್ಲಿ ಬ್ಯುಸಿಯಾಗಿರೋ ನಿತ್ಯಾ ಮೆನನ್, ಕನ್ನಡ ಹಾಗೂ ಹಿಂದಿಯಲ್ಲೂ ಸಿನಿಮಾ ಮಾಡಿ ಸಕ್ಸಸ್ ಆಗಿದ್ದಾರೆ. ನಿತ್ಯಾ ಮೆನನ್ ಒಂದು ಸಿನಿಮಾಗೆ 90 ಲಕ್ಷ ರೂಪಾಯಿ ಸಂಭಾವನೆ ಪಡೀತಾರೆ..
ನಟಿ ತ್ರಿಷಾ ಕೃಷ್ಣನ್ 9ನೇ ಸ್ಥಾನದಲ್ಲಿದ್ದಾರೆ. ತ್ರಿಷಾ ಸಿನಿಮಾ ಇಂಡಸ್ಟ್ರಿಗೆ ಬಂದು 15 ವರ್ಷವಾದ್ರೂ, ಈಗಲೂ ಬೇಡಿಕೆ ಇದೆ. ತ್ರಿಷಾ ಕೂಡ ಒಂದು ಸಿನಿಮಾಗೆ 90 ಲಕ್ಷದಿಂದ 1 ಕೋಟಿವರೆಗೆ ಸಂಭಾವನೆ ಪಡೀತಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆ ಉಳಿಸಿಕೊಂಡಿರೋ ನಟಿ ತ್ರಿಷಾ..
ಟಾಪ್ 8ನೇ ಸ್ಥಾನದಲ್ಲಿರದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ.. ತಮನ್ನಾ ಕೂಡ ಬಹುಭಾಷಾ ನಟಿ. ಬಾಹುಬಲಿಯಂತ ಸಿನಿಮಾದಲ್ಲಿ ಕಾಣಿಸಿಕೊಂಡು, ಪಡ್ಡೆಗಳ ಹೃದಯ ಕದ್ದ ಈ ಚೆಲುವು ಒಂದು ಸಿನಿಮಾಗೆ ಮಿನಿಮಮ್ 1 ಕೋಟಿ ಚಾರ್ಚ್ ಮಾಡ್ತಾರೆ.
ಏಳನೇ ಸ್ಥಾನದಲ್ಲಿರೋ ನಟಿ ಅಂದ್ರೆ, ಅದು ನಯನತಾರಾ.. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈಗಲೂ ನಂಬರ್ ಒನ್ ನಟಿಯಂತಲೇ ಗುರುತಿಸಿಕೊಳ್ಳೋ ನಯನತಾರಾ ಕೂಡ ಒಂದು ಸಿನಿಮಾಗಿ ಮಿನಿಮನ್ ಒಂದು ಕೋಟಿ ಸಂಭಾವನೆ ಪಡೀತಾರೆ.
ನಂಬರ್ 6ನೇ ಸ್ಥಾನದಲ್ಲಿ ಶೃತಿ ಹಾಸನ್ ಇದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಬಹುಬೇಡಿಕೆಯ ನಟಿ ಶೃತಿ.. ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಖ್ಯಾತಿ ಪಡೆದಿರೋ ಶೃತಿ ಕೂಡ ಒಂದು ಸಿನಿಮಾಗೆ 1 ಕೋಟಿಗೂ ಹೆಚ್ಚು ಸಂಭಾವನೆ ತಗೊಳ್ತಾರೆ.
ಟಾಪ್ ಫೈವ್ನಲ್ಲಿ ರಕುಲ್ ಪ್ರೀತ್ ಸಿಂಗ್ ಇದ್ದು, ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯ ಹಾಟ್ ಫೇವರ್. ರಕುಲ್ ಪ್ರೀತ್, ತೆಲುಗಿನ ಟಾಪ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ತಮಿಳಿನಲ್ಲೂ ನಟಿಸಿ ಸೈ ಎನಿಸಿಕೊಂಡಿರೋ ರಕುಲ್, ಒಂದು ಸಿನಿಮಾಗೆ ಮಿನಿಮನ್ ಒಂದು ಕೋಟಿ.. ಅಥವಾ ಒಂದೂಕಾಲು ಕೋಟಿ ಪಡೀತಾರೆ.
ನಾಲ್ಕನೇ ಸ್ಥಾನದಲ್ಲಿರೋ ನಟಿ ಅಂದ್ರೆ, ಅದು ಕೀರ್ತಿ ಸುರೇಶ್. ಈ ಯುವ ನಟಿ, ಸದ್ಯ ಯುವಕರ ಹಾಟ್ ಪೇವರಿಟ್. ತೆಲುಗು ಹಾಗೂ ತಮಿಳಿನಲ್ಲಿ ಮಿಂಚುತ್ತಿರೋ ಕೀರ್ತಿ, ಈಗಷ್ಟೇ ಶೈನ್ ಆಗ್ತಿದ್ದಾರೆ. ಕೀರ್ತಿ ಸುರೇಶ್ ಒಂದು ಸಿನಿಮಾಗೆ ಬರೋಬ್ಬರಿ ಒಂದೂವರೆ ಕೋಟಿ ಪಡೀತಾರೆ.
ನಂಬರ್ ತ್ರಿ ಸ್ಥಾನದಲ್ಲಿ ಹಿರಿಯ ನಟಿ ಕಾಜಲ್ ಅಗರ್ವಾಲ್ ಇದ್ದಾರೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಕಾಜಲ್. ಬಹುತೇಕ ಎಲ್ಲಾ ಸೂಪರ್ಸ್ಟಾರ್ಗಳ ಜೊತೆ ನಟಿಸಿರೋ ಕಾಜಲ್, ಇಂಡಸ್ಟ್ರಿಗೆ ಬಂದು 12 ವರ್ಷವಾದ್ರೂ, ಇನ್ನೂ, ತನ್ನದೇ ಫೇಮ್ ಉಳಿಸಿಕೊಂಡಿದ್ದಾರೆ. ಕಾಜಲ್ ಒಂದು ಸಿನಿಮಾಗೆ 2 ಕೋಟಿ ಸಂಭಾವನೆ ಪಡೀತಾರೆ.
ನಂಬರ್ ಟು ಪ್ಲೇಸ್ನಲ್ಲಿ ಸಮಂತಾ ಅಕ್ಕಿನೇನಿ ಇದ್ದಾರೆ. ಮದುವೆಯಾದ್ರೂ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ, ಗೆಲ್ಲುತ್ತಿರೋ ಸಮಂತಾ ಸದ್ಯ ಸೌತ್ ಇಂಡಿಯಾದ ಟಾಪ್ ಟು ಹಿರೋಯಿನ್. ಸಮಂತಾ ಕೂಡ ಒಂದು ಸಿನಿಮಾಗೆ ಮಿನಿಮನ್ 2 ಕೋಟಿ ಸಂಭಾವನೆ ಪಡೀತಾರೆ.
ನಂಬರ್ ಒನ್ ಯಾರಪ್ಪ ಅಂದ್ರೆ, ಅದು ನನ್ ಅದರ್ ಧೆನ್ ಕರ್ನಾಟಕದ ಚೆಲುವು ಅನುಷ್ಕಾ ಶೆಟ್ಟಿ. ಸಿನಿಮಾ ಇಂಡಸ್ಟ್ರಿಗೆ ಬಂದು 14 ವರ್ಷವಾದ್ರೂ, ಅನುಷ್ಕಾ ಶೆಟ್ಟಿಯೇ ಈಗಲೂ ನಂಬರ್ ಒನ್ ನಟಿ. ತೆಲುಗು, ತಮಿಳು, ಮಲಯಾಳಂನಲ್ಲಿ ಅನುಷ್ಕಾ ಈಗಲೂ ನಂಬರ್ ಒನ್. ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರೂ, ಹೀರೋಗಳ ರೇಂಜ್ನಲ್ಲಿ ಅನುಷ್ಕಾ ಫ್ಯಾನ್ ಫಾಲೋಯಿಂಗ್ ಇದ್ದು, ಅಷ್ಟೇ ಸಂಭಾವನೆ ಕೂಡ ಇದೆ. ಅನುಷ್ಕಾ ಒಂದು ಸಿನಿಮಾಗೆ ಬರೋಬ್ಬರಿ 4 ಕೋಟಿ ಸಂಭಾವನೆ ಪಡೀತಾರೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?